ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಸರ್ಕಾರಿ ಸೌಲಭ್ಯ ಸರಿಯಾಗಿ ಬಳಸಿಕೊಳ್ಳಿ'

Vishwanath S
Updated On : 14 Jul 2013, 12:38 pm

ಹುಣಸಗಿ: ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲತ್ತುಗಳ ತಿಳಿವಳಿಕೆ ಇಲ್ಲದ್ದರಿಂದ ಇಂದು ಅವು ಸಮರ್ಪಕ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಸೌಲಭ್ಯಗಳನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.
ಇಲ್ಲಿಯ ಗ್ರಾಪಂ ಸಭಾಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಗುರುತಿನ ಚೀಟಿ ಹಾಗೂ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ದುರುಪಯೋಗ ಸಲ್ಲದು: ಕಾರ್ಮಿಕ ವರ್ಗದವರಿಗೆ ಮಾತ್ರ ಗುರುತಿನ ಚೀಟಿ ಸಿಗುವಂತಹ ಕೆಲಸವಾಗಬೇಕು. ನಕಲಿ ಚೀಟಿಯನ್ನು ಪಡೆಯುವುದು ಅಪರಾಧವಾಗಿದ್ದು, ಸರ್ಕಾರದ ಯೋಜನೆ ದುರುಪಯೋಗವನ್ನು ತಡೆಯಬೇಕು. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಸಂಘಟನೆ ಸದಸ್ಯರು ಸದಾ ಜಾಗೃತರಾಗಿರಬೇಕು. ಯಾವುದೇ ಸಂದರ್ಭದಲ್ಲಿಯೂ ನ್ಯಾಯಯುತವಾದ ಕೆಲಸವನ್ನು ಮಾಡಲು ಹಿಂಜರಿಯಬಾರದು ಎಂದು ಕಿವಿಮಾತು ಹೇಳಿದರು.
ಕಾರ್ಮಿಕರ ಒಕ್ಕೂಟದ ರಾಜ್ಯಾಧ್ಯಕ್ಷ ಬಿ.ದೇವರಾಜ ಮಾತನಾಡಿ, ಸುರಪುರ ತಾಲೂಕಿನ ಸುಮಾರು 15 ಸಾವಿರಕ್ಕೂ ಹೆಚ್ಚು ಕಟ್ಟಡ ಕಾರ್ಮಿಕರಿದ್ದಾರೆ. ಆದರೆ ಹೆಸರು ನೋಂದಣಿಯಾಗಿದ್ದು ಕೇವಲ 650 ಸದಸ್ಯರದ್ದು ಮಾತ್ರ. ಆದ್ದರಿಂದ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಎಲ್ಲ ಕಾರ್ಮಿಕರು ಗುರುತಿನ ಚೀಟಿಯನ್ನು ಪಡೆದು ಸೌಲಭ್ಯ ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.
ಬೆನ್ನೆಲುಬು: ರಾಜ್ಯ ಸಂಘಟನಾ ಕಾರ್ಯದರ್ಶಿ ಚಿದಾನಂದ, ಕಟ್ಟಡ ಕಾರ್ಮಿಕರ ಸಂಘ ಪ್ರಾರಂಭವಾದಾಗಿನಿಂದ ಕಾರ್ಮಿಕರಿಗೆ ಇದು ಬೆನ್ನೆಲುಬಾಗಿ ನಿಂತಿದೆ. ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಜಿಲ್ಲಾ ಕಾರ್ಮಿಕ ಅಧಿಕಾರಿ ಚನ್ನಾರಡ್ಡಿ ಚವ್ಹಾಣ, ಕಾರ್ಮಿಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಮತ್ತು ಅವುಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ ವಿವರಿಸಿದರು.
ಗ್ರಾಪಂ ಅಧ್ಯಕ್ಷ ಸುರೇಶ ನಿರಲಗಿ, ತಾಪಂ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರಗೌಡ ವಜ್ಜಲ್, ಶಿವಣ್ಣ ಮಂಗಿಹಾಳ, ಬಸನಗೌಡ ಯಡಿಯಾಪುರ, ನಿಂಗಣ್ಣ ಬಳಿ, ತಿಪ್ಪಣ್ಣ ಚಂದಾನವರ, ಬಸಣ್ಣ ದೊರೆ, ಮಡಿವಾಳಪ್ಪ ಮಿಲಿಟ್ರಿ, ವಿರೇಶ ಹಳ್ಳೂರ್, ಬಸವರಾಜ್ ಸಜ್ಜನ್ ಇತರರು ಇದ್ದರು. ಪ್ರಭು ನನಗೂರ ಸ್ವಾಗತಿಸಿದರು. ಕಾಳಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement