ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುರಪುರ ಬಸ್‌ನಿಲ್ದಾಣ ಅವ್ಯವಸ್ಥೆಯ ಆಗರ

Vishwanath S
Updated On : 14 Jul 2013, 12:39 pm

ಸುರಪುರ:ಇಲ್ಲಿಯ ಬಸ್ ನಿಲ್ದಾಣ ಪ್ರಯಾಣಿಕರಿಗೆ ಪ್ರಯಾಸಪಡುವಂತೆ ಮಾಡುತ್ತಿದೆ. ನಿಲ್ದಾಣದ ಆವರಣ ತುಂಬ ದೊಡ್ಡ ಹೊಂಡಗಳು ಬಿದ್ದಿದ್ದು, ಮಳೆ ನೀರು ಸಂಗ್ರಹವಾಗಿರುವುದರಿಂದ ಸಾರ್ವಜನಿಕರು ಜಿಗಿಯುತ್ತಲೇ ಬಸ್ ನಿಲ್ದಾಣಕ್ಕೆ ಕಾಲಿಡುವಂತಾಗಿದೆ. ಬಟ್ಟೆ ಹೊಲಸು ಮಾಡಿಕೊಳ್ಳದೇ ಅಲ್ಲಿಂದ ಪಾರಾಗಿ ಬರುವುದೇ ದೊಡ್ಡ ಸಾಹಸದ ಕಾರ್ಯವಾಗಿದೆ.
ಅಷ್ಟೇ ಅಲ್ಲ, ನಿಲ್ದಾಣದ ತುಂಬ ಬಿಡಾಡಿ ದನಗಳು, ಕುರಿ ಹಾಗೂ ಭಿಕ್ಷುಕರ ವಾಸಸ್ಥಾನವಾಗಿದೆ. ಇಕ್ಕಟ್ಟಾದ ಆವರಣದಲ್ಲಿ ದ್ವಿಚಕ್ರ ವಾಹನಗಳು, ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಖಾಸಗಿ ವಾಹನಗಳ ಭರಾಟೆ ಹಾಗೂ ಮೂಲಭೂತ ಸೌಕರ್ಯಗಳ ಕೊರತೆ ಮಧ್ಯೆ ಬಸ್ ಪ್ರಯಾಣಿಕ ಇಲ್ಲಿ ಕಳೆದುಹೋಗುತ್ತಿದ್ದಾನೆ.ಇದು ಬೀದರ್ ಬೆಂಗಳೂರು ಹೆದ್ದಾರಿ ಮಧ್ಯದಲ್ಲಿ ಬರುವ ಸುರಪುರ ಬಸ್ ನಿಲ್ದಾಣದ ಚಿತ್ರಣ. ವಿವಿಧ ಘಟಕ, ಜಿಲ್ಲೆ ಹಾಗೂ ರಾಜ್ಯಗಳಿಂದ ಇಲ್ಲಿಗೆ ನಿತ್ಯ ಸುಮಾರು 500ಕ್ಕೂ ಹೆಚ್ಚು ಬಸ್‌ಗಳು ಬಂದುಹೋಗುವ ಪ್ರಮುಖ ನಿಲ್ದಾಣವಾಗಿದೆ. ಆದರೆ ನಿಲ್ದಾಣ ಮಾತ್ರ ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ. ಬಿಡಾಡಿ ದನ, ಕುರಿಗಳು ಹಾಗೂ ಭಿಕ್ಷುಕರು ಇಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದು, ಇದಕ್ಕೆ ಇಲಾಖೆ ಸಿಬ್ಬಂದಿ ಆಕ್ಷೇಪಣೆ ಕೂಡ ಇಲ್ಲ. ಇದರಿಂದ ಪ್ರಯಾಣಿಕ ಇಲ್ಲಿ ಪರದಾಡುವಂತಾಗಿದೆ. ಶುಚಿತ್ವ ಎನ್ನುವ ಪದವೇ ಈ ನಿಲ್ದಾಣಕ್ಕೆ ಅನ್ವಯಿಸುವುದಿಲ್ಲ. ಜಾನುವಾರುಗಳ ಸೆಗಣಿ, ನಿಲ್ದಾಣದ ಆವರಣದಲ್ಲೇ ವಿಸರ್ಜನೆ, ಕಸಕಡ್ಡಿಗಳ ರಾಶಿ ಸೇರಿ ವಾತಾವರಣ ಗಬ್ಬೆದ್ದಿದೆ. ಈಗ ಮಳೆಗಾಲವಾದ್ದರಿಂದ ನಿಲ್ದಾಣವೇ ಅಸಹ್ಯವೆನಿಸಿದೆ. ನಿಯಮಗಳಿಲ್ಲ: ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವ್ಯವಸ್ಥೆ ಇಲ್ಲದ್ದರಿಂದ ಬಂದ ವಾಹನಗಳೆಲ್ಲ ಎಲ್ಲೆಂದರಲ್ಲಿ ನಿಲ್ಲುತ್ತವೆ. ಅದೇ ಸಮಯದಲ್ಲಿ ಮತ್ತಷ್ಟು ವಾಹನಗಳು ಬಂದರೆ ಮೊದಲಿನ ವಾಹನ ಹೊರಗೆ ತೆಗೆಯಲು ಚಾಲಕರು ಹರಸಾಹಸ ಪಡಬೇಕಾಗುತ್ತದೆ. ನಿಲ್ದಾಣದಲ್ಲಿ ಜಾನುವಾರು ತುಂಬಿರುತ್ತವೆ. ಭಿಕ್ಷುಕರು ಹಾಯಾಗಿ ಮಲಗಿರುತ್ತಾರೆ. ದ್ವಿಚಕ್ರ ವಾಹನಗಳು ನೇರವಾಗಿ ಬಸ್ ನಿಲುಗಡೆ ಸ್ಥಳದಲ್ಲೇ ನಿಲ್ಲುತ್ತವೆ. ನಿಲ್ದಾಣದ ಪ್ರವೇಶ ದ್ವಾರದಲ್ಲೇ ಟಂಟಂ ರಿಕ್ಷಾ, ಜೀಪು ಇತ್ಯಾದಿ ಖಾಸಗಿ ವಾಹನಗಳು ಬಂದು ನಿಲ್ಲುತ್ತವೆ. ನಿಲ್ದಾಣದಲ್ಲಿನ ಪ್ರಯಾಣಿಕರನ್ನು ಕೂಗಿ ಕರೆದು ಹತ್ತಿಸಿಕೊಂಡು ಹೋಗುತ್ತವೆ. ಆದರೆ ಇಲಾಖೆ ಸಿಬ್ಬಂದಿಯಿಂದ ಇದಾವುದಕ್ಕೂ ಆಕ್ಷೇಪಣೆಯೇ ಇಲ್ಲ. ಅಧಿಕಾರಿಗಳು ಮೌನವಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

-ಮಲ್ಲು ಗುಳಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement