ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಧ್ಯಕ್ಷ ಸ್ಥಾನದಿಂದ ಜವಾಬ್ದಾರಿ ಹೆಚ್ಚಳ: ಹೊನ್ಕಲ್

Lingaraj Badiger
Updated On : 15 Jul 2013, 11:18 am

ಶಹಾಪುರ: ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನನ್ನನ್ನು ಆಯ್ಕೆ ಮಾಡಿ ಸಾಹಿತ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಕೃಷಿ ಮಾಡಲು ಅವಕಾಶ ಮಾಡಿಕೊಟ್ಟಿದೆ ಎಂದು ಜಿಲ್ಲಾ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷ ಸಿದ್ರಾಮ ಹೊನ್ಕಲ್ ಅಭಿಪ್ರಾಯ ವ್ಯಕ್ತಪಡಿಸಿದರು.
 ಪಟ್ಟಣದ ತಮ್ಮ ನಿವಾಸದಲ್ಲಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಏರ್ಪಡಿಸಿದ ಸನ್ಮಾನ ಹಾಗೂ ಅಧಿಕೃತ ಆಹ್ವಾನ ಸ್ವೀಕರಿಸಿ ಮಾತನಾಡಿದರು.
 ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ಸಿನ್ನೂರ, ಸಾಹಿತಿಗಳಾದ ಎಲ್.ಬಿ.ಕೆ.ಆಲ್ದಾಳ, ಚಂದ್ರಕಾಂತ ಕರದಳ್ಳಿ, ಶಿವಣ್ಣ ಇಜೇರಿ, ವಿಶ್ವರಾಧ್ಯ ಸತ್ಯಂಪೇಟೆ, ತಾಲೂಕು ಕಸಾಪ ಅಧ್ಯಕ್ಷ ಸಿದ್ದಲಿಂಗಪ್ಪ ಆನೇಗುಂದಿ, ಅಶೋಕ ಚೌದ್ರಿ, ಮೂಗಲಪ್ಪ ನಾಯ್ಕನಿ, ಶಿವಶರಣಪ್ಪ ಶಿರೂರ, ಡಾ. ಗಾಳೆಪ್ಪ ಪೂಜಾರಿ ಮತ್ತಿತರರಿದ್ದರು.

ರಿಕ್ಷಾ ಪಲ್ಟಿ: ವ್ಯಕ್ತಿ ಸಾವು
ಯಾದಗಿರಿ: ಆಟೋ ರಿಕ್ಷಾಮೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮವಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಭೀಮಾ ನದಿ ಸೇತುವೆ ಮೇಲೆ ಭಾನುವಾರ ಸಂಭವಿಸಿದೆ. ಆಟೋ ಚಾಲಕ ಶಂಕ್ರಪ್ಪ (30) ಮೃತಪಟ್ಟವರು. ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement