ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕನ್ನಡದ ಕಟ್ಟಾಳು ಆಲೂರು ವೆಂಕಟರಾಯರು

Lingaraj Badiger
Updated On : 15 Jul 2013, 11:19 am

ಶಹಾಪುರ: ಕನ್ನಡವನ್ನು ಭಾರತದ ಮೂಲಕ ನೋಡದೆ ಕನ್ನಡವು ಕರ್ನಾಟಕದ ಮೂಲಕ ಭಾರತ ನೋಡುವಂತಾಗಬೇಕು ಎಂಬುದು ಆಲೂರರ ದ್ವನಿಯಾಗಿತ್ತು ಎಂದು ಸಾಹಿತಿ ಶಿವಣ್ಣ ಇಜೇರಿ ನುಡಿದರು. ಪಟ್ಟಣದ ಚಿಂತಮ್ಮ ಗೌಡ್ತಿ ಮಹಾವಿದ್ಯಾಲಯದಲ್ಲಿ ಸಗರನಾಡು ಪ್ರತಿಷ್ಠಾನ ಏರ್ಪಡಿಸಿದ್ದ ಆಲೂರು ವೆಂಕಟರಾಯರ ಜನ್ಮ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಆಲೂರರು ಕನ್ನಡದ ಕಟ್ಟಾಳುವಾಗಿದ್ದರು ಎಂದರು. ನಿವೃತ್ತ ಪ್ರಾಚಾರ್ಯ ಡಿ.ಜಿ. ಬಳ್ಳೂರಗಿ ಮಾತನಾಡಿದರು. ಪ್ರತಿಷ್ಠಾನದ ಅಧ್ಯಕ್ಷ
 ಪ್ರಕಾಶ ಅಂಗಡಿ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅಶೋಕ ಚೌದ್ರಿ, ಕಾಲೇಜಿನ ಪ್ರಾಚಾರ್ಯ ಎಂ.ಎ.ಅವಂಟಿ ಇದ್ದರು. ಮಲ್ಲಯ್ಯ ಸ್ವಾಮಿ ಇಟಗಿ ನಿರೂಪಿಸಿದರು. ಶಶಿಕಲಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement