ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಮೆ ಮಾಡಿಸುವುದು ಸಮಾಜ ಸೇವೆ ಪ್ರತೀಕ: ನರಸಯ್ಯ

Lingaraj Badiger
Updated On : 15 Jul 2013, 11:11 am

ಯಾದಗಿರಿ: ಜನ ಸಾಮಾನ್ಯರಿಗೆ ಜೀವ ವಿಮೆ ಮಾಡಿಸುವ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸುವ ಕೆಲಸವನ್ನು ವಿಮಾ ಏಜೆಂಟರು ಮಾಡುತ್ತಿದ್ದು, ಇದು ಸಮಾಜ ಸೇವೆಯ ಪ್ರತೀಕ ಎಂದು ಭಾರತೀಯ ಜೀವ ವಿಮಾ ನಿಗಮದ ರಾಯಚೂರು ವಿಭಾಗೀಯ ಅಧಿಕಾರಿ ಜಿ. ನರಸಯ್ಯ ಹೇಳಿದರು.
ಇಲ್ಲಿನ ಎಲ್‌ಐಸಿ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಜೀವನ ಸ್ಪೂರ್ತಿ ಬಳಗದ ಪ್ರತಿನಿಧಿಗಳ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದರು. ದೇಶದಲ್ಲಿ ಎಲ್‌ಐಸಿ ಸೇರಿದಂತೆ 24 ವಿಮಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಇವೆಲ್ಲವೂ ಭಾರತ ಸರ್ಕಾರದ ವಿಮಾ ಪ್ರಾಧಿಕಾರದ ನಿಯಂತ್ರಣಕ್ಕೆ ಒಳಪಟ್ಟಿರುತ್ತವೆ. ಪ್ರಾಧಿಕಾರ ಬದಲಾವಣೆ ಮಾಡುವ ವಿಮೆಗಳ ಬಗ್ಗೆ ಏಜೆಂಟರು ತಿಳಿದುಕೊಂಡು ಪಾಲಿಸಿದಾರರಿಗೆ ತಿಳಿ ಹೇಳುವ ಕಾರ್ಯ ಮಾಡಬೇಕು. ಏಜೆಂಟರು ಪ್ರತಿ ನಿತ್ಯ ಜನಸಮಾನ್ಯರನ್ನು ತಲುಪಲು ಪ್ರಯತ್ನಿಸಿ ಜೀವ ವಿಮೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಈ ಬಾರಿ ಎಲ್‌ಐಸಿ ಯಾದಗಿರಿ ವಿಭಾಗ ಅತ್ಯಧಿಕ ಪಾಲಸಿದಾರರನ್ನು ತಲುಪಿದ್ದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಜೀವ ವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಎಸ್.ಎನ್. ಮಣ್ಣೂರ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ ಜೀವನ ಸ್ಪೂರ್ತಿ ಬಳಗ ಹೆಚ್ಚಿನ ಪಾಲಿಸಿಗಳನ್ನು ಮಾಡಿಸುವ ಮೂಲಕ ವಿಭಾಗವನ್ನು 4ನೇ ಸ್ಥಾನಕ್ಕೆ ತಂದಿದ್ದಾರೆ. ಅವರ ಸತತ ಪರಿಶ್ರಮವೇ ಈ ಯಶಸ್ಸಿಗೆ ಕಾರಣ. ನಮ್ಮ ಬಳಗದಲ್ಲಿ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಏಜೆಂಟರಿದ್ದಾರೆ. ಪ್ರತಿದಿನ ಜನಸಾಮಾನ್ಯರನ್ನು ತಲುಪಿ ವಿಮೆ ಮಾಡಿಕೊಳ್ಳುವಂತೆ ತಿಳಿ ಹೇಳಬೇಕು ಎಂದರು.
ಇದೇ ಸಂದರ್ಭದಲ್ಲಿ ಹೆಚ್ಚು ವಿಮಾ ಪಾಲಿಸಿ ಮಾಡಿಸಿದ ಏಜೆಂಟರಾದ ಸಿ.ಎಂ. ಪಟ್ಟೇದಾರ್, ವಿರೂಪಾಕ್ಷಪ್ಪ, ಹೀರಾಸಿಂಗ್, ವೈಜನಾಥ ರಡ್ಡಿ, ನಾರಾಯಣ ಇತರರನ್ನು ಸನ್ಮಾನಿಸಲಾಯಿತು.
--
ಆಟೋ ರಿಕ್ಷಾ ಪಲ್ಟಿ: ಚಾಲಕ ಸಾವು
ಯಾದಗಿರಿ: ಆಟೋ ರಿಕ್ಷಾಮೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮವಾಗಿ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿಗೆ ಸಮೀಪದ ಭೀಮಾ ನದಿ ಸೇತುವೆ ಮೇಲೆ ಭಾನುವಾರ ಸಂಭವಿಸಿದೆ.
ಆಟೋ ಚಾಲಕ ಶಂಕ್ರಪ್ಪ (30) ಮೃತಪಟ್ಟವರು. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement