ಸಂಗ್ವಾರ: ಪಶು ಲಸಿಕೆ ಕಾರ್ಯಕ್ರಮ ಯಶಸ್ವಿ
ಯಾದಗಿರಿ: ತಾಲೂಕಿನ ಸಂಗ್ವಾರ ಗ್ರಾಮದಲ್ಲಿ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ ಹಾಗೂ ಪಶು ಚಿಕಿತ್ಸಾಲಯ ಸೈದಾಪುರ, ರೈತ ಸಂಪರ್ಕ ಕೇಂದ್ರದ ಆಶ್ರಯದಲ್ಲಿ ಪಶು ಲಸಿಕೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭದಲ್ಲಿ ಜಾನುವಾರುಗಳಿಗೆ ಗಂಟಲು ಬೇನೆ, ಜಂತು ನಾಶಕ ಔಷಧಿ ಹಾಗೂ ಬರಡು ದನಗಳಿಗೆ ಚಿಕಿತ್ಸೆ ನೀಡಲಾಯಿತು. ಆಕಳು, ಎಮ್ಮೆ, ಕುರಿ, ಮೇಕೆಗಳಿಗೆ ಗಂಟಲು ಬೇನೆ ಲಸಿಕೆ, ಜಂತುನಾಶಕ ಔಷಧಿ ನೀಡಲಾಯಿತು. ಅಲ್ಲದೇ ಸಾಮಾನ್ಯ ಚಿಕಿತ್ಸೆ, ಬರಡು ದನಗಳ ಚಿಕಿತ್ಸೆ ನೀಡಲಾಯಿತು. ಮುಖ್ಯ ಅತಿಥಿಗಳಾಗಿ ಪಶು ವೈದ್ಯಾಧಿಕಾರಿ ಡಾ. ಷಣ್ಮುಖ ಗೊಂಗಾಡಿ, ಕೃಷಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಶಿವಶಂಕರ, ಪಶು ವೈದ್ಯಕೀಯ ಪರೀಕ್ಷಕ ಶಂಕರಪ್ಪ, ಶಿವರಡ್ಡಿ, ಸಾಂಬಶಿವ ಮತ್ತು ಕೃಷಿ ಅಧಿಕಾರಿ ರಾಜಕುಮಾರ ಇದ್ದರು. ಭೀಗುಡಿ ಕೃಷಿ ಕಾಲೇಜಿನ ವಿಸ್ತರಣಾ ವಿಭಾಗದ ಪ್ರಾಧ್ಯಾಪಕ ಡಾ. ಶಶಿಧರ ಕೆ.ಕೆ., ಡಾ. ಜಯಶಂಕರ ಉಪನ್ಯಾಸ ನೀಡಿದರು. ಪಶು ವೈದ್ಯಕೀಯ ಪರೀಕ್ಷಕ ಹಂಪೇಶ, ವಿದ್ಯಾರ್ಥಿಗಳಾದ ಪ್ರಸಾದ ಲಗಶೆಟ್ಟಿ, ಸುಧಾಕರ, ಚಂದ್ರಶೇಖರಗೌಡ, ಯಲ್ಲರೆಡ್ಡಿ, ಅಮೋಲ್ ಪಾಟೀಲ್, ಲೇಖನಾಥ ರಾಠೋಡ್, ಶ್ರೀಕಾಂತ ಟೆಂಗಳಿ, ಇಮ್ರಾನ್ ಅಲಿ, ಬಸವರಾಜ.ಜಿ ಇದ್ದರು.