ಸುಭಾಶ್ಚಂದ್ರ ಬೋಸ್ ಪ್ರತಿಮೆ ಕಟ್ಟೆಗೆ ಸಗಣಿ
ಗುಲ್ಬರ್ಗ: ನಗರದ ಹುಮನಾಬಾದ್ ಬೇಸ್ನಲ್ಲಿರುವ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ ಪ್ರತಿಮೆಯ ಕಟ್ಟೆಗೆ ಕೆಲ ಕಿಡಿಗೇಡಿಗಳು ಸಗಣಿ ಬಳಿದ ಘಟನೆ ಬೆಳಕಿಗೆ ಬಂದಿದೆ.
ನೇತಾಜಿ ಪ್ರತಿಮೆ ಕಟ್ಟೆಗೆ ಕಿಡಿಗೇಡಿಗಳು ಸಗಣಿ ಬಳಿದ ಸುದ್ದಿ ತಿಳಿದು ಚೌಕ್ ಪೊಲೀಸ್ ಠಾಣೆಯ ಪಿಐ, ಪಿಎಸ್ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಲವು ಸಿಬ್ಬಂದಿ ಸಗಣಿ ಸ್ವಚ್ಛಗೊಳಿಸಿದರು.