...ಸಮಗ್ರ ಪ್ರಶಸ್ತಿ ಗರಿ
ಗುಲ್ಬರ್ಗ: ಬೆಂಗಳೂರಿನಲ್ಲಿ ಶಿವಜ್ಯೋತಿ ಯೋಗ ಕೇಂದ್ರ ಇತ್ತೀಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ಯೋಗಾಸನ ಸ್ಫರ್ಧೆಯಲ್ಲಿ ನಗರದ ಸ್ವಾಮಿ ನಾರಾಯಣ ಗುರುಕುಲ ಅಂತಾರಾಷ್ಟ್ರೀಯ ಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ರಶ್ವಂತ ಎಸ್.ಎಸ್. ಪ್ರಥಮ ಬಹುಮಾನ, ಓಂ.ಕೆ.ವ, ಕಿರಣ ವಿ.ಎಸ್. ಮತ್ತು ಭವ್ಯ ಆರ್.ಪಿ. ಅವರು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಸಿದ್ಧಾಂತ ಎಸ್.ಎಸ್, ವೈಭವ ಜಿ.ಕೆ, ನಿಶಾಂತ, ಸಾಯಿಕಿರಣ, ದರ್ಶನ ಜಿ.ಬಿ, ಶರಣಪ್ರಕಾಶ, ಆರ್ಯ ಎಸ್.ಸಿ, ಸಮರ್ಥ ಪಿ.ಕೆ. ವಿಶ್ವಚೇತನ, ವಿಖ್ಯಾತ್ ಎಲ್.ಎಸ್. ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಶಾಲೆಯ ಯೋಗ ಶಿಕ್ಷಕ ಬಿ. ಜಯರಾಮ ಅವರಿಗೆ ಯೋಗಕ್ಷೇತ್ರದಲ್ಲಿ 19 ವರ್ಷ ಸೇವೆ ಸಲ್ಲಿಸಿರುವುದಕ್ಕಾಗಿ ಯೋಗರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.