ಅಪಘಾತ: 6 ಮಂದಿ ಸಾವು
ಗುಲ್ಬರ್ಗ: ನಾಲವಾರ ಬಳಿ ಮಂಗಳವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಲಾರಿ ಮತ್ತು ಟಂಟಂ ನಡುವೆ ಸಂಭವಿಸಿದ ಅಪಘಾತದಲ್ಲಿ 6 ಜನ ಮೃತಪಟ್ಟ ಘಟನೆ ನಡೆದಿದೆ. ಈ ಘಟನೆಯಲ್ಲಿ 6 ಜನ ಗಾಯಗೊಂಡಿದ್ದಾರೆ. 3 ಮಂದಿ ಗಂಡಸರು, 2 ಹೆಂಗಸರು ಮತ್ತು 1 ಮಗು ಮೃತ ದುರ್ದೈವಿಗಳು. ಇವರು ಯಾದಪುರ ತಾಂಡದವರಾಗಿದ್ದಾರೆ. ಪಡಿತರ ಚೀಟಿ ನೋಂದಣಿಗಾಗಿ ವಾಡಿಗೆ ಬಂದಿದ್ದ ಇವರು, ಕೆಲಸವನ್ನು ಮುಗಿಸಿಕೊಂಡು ತಮ್ಮ ಸ್ವಗ್ರಾಮಕ್ಕೆ ವಾಪಾಸಾಗುತ್ತಿದ್ದರು. ಮೃತರ ಹೆಸರು ಮತ್ತು ಇತರೆ ಮಾಹಿತಿ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಶಹಾಬಾದ್ ಡಿಎಸ್ಪಿ ಸೂರ್ಯವಂಶಿ ತಿಳಿಸಿದ್ದಾರೆ. ಗಾಯಾಳುಗಳನ್ನು ಸನಿಹದ ವಾಡಿ- ಚಿತ್ತಾಪುರ ಸರ್ಕಾರಿ ಆಸ್ಪತ್ರೆಗಳಿಗೆ ಸೇರಿಸಲಾಗಿದ್ದು, ಚಿಕಿತ್ಸಾ ಕಾರ್ಯ ಮುಂದುವರೆದಿದೆ.