ಕ್ಯಾರಿಓವರ್ ಜಾರಿಗೆ ಆಗ್ರಹ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.16
ಡಿಪ್ಲೊಮಾ ಸಿಒಬಿ(ಕ್ಯಾರಿ ಓವರ್ ಬೆನ್‌ಫಿಟ್) ಜಾರಿಗೊಳಿಸಬೇಕು ಎಂದು ಕಾಂಗ್ರೆಸ್ ವಿದ್ಯಾರ್ಥಿ ಘಟಕವು ಗುಲ್ಬರ್ಗದಲ್ಲಿ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿತು.
ಡಿಪ್ಲೊಮಾ ಟೆಕ್ನಿಕಲ್ ಎಜ್ಯುಕೇಷನ್ ಬೋರ್ಡ್ ವತಿಯಿಂದ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವುದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಪ್ರಶಾಂತ ಪಾಟೀಲ್, ಮಹೀಂದ್ರ ಕೊಳ್ಳೂರ್, ಅರುಣ, ಸಿದ್ದಾರ್ಥ ರಂಗನೂರ್, ವಿಶಾಲ್ ಪಾಟೀಲ್, ಶಿವರಾಜ ಪಾಟೀಲ್, ಭವಾನಿ ದರ್ಗಿ ಇತರ ಕಾಲೇಜಿನ ವಿದ್ಯಾರ್ಥಿಗಳು ಇದ್ದರು.
ಇಂದು ಮೆರವಣಿಗೆ: ಹೈ.ಕ. ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಒಕ್ಕೂಟದ ವತಿಯಿಂದ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಕ್ಯಾರಿಓವರ್ ಪದ್ಧತಿಯನ್ನು ಈ ಶೈಕ್ಷಣಿಕ ವರ್ಷದಲ್ಲಿಯೂ ಜಾರಿಗೆ ತರಬೇಕೆಂದು ಒತ್ತಾಯಿಸಿ ಜು.17ರಂದು ಬೆಳಗ್ಗೆ 10. 30ಕ್ಕೆ ನಗರದ ಜಾಜಿ ಬ್ಲಾಕ್ ಮೈದಾನದಿಂದ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು.
ಹೆಚ್ಚಿನ ಸಂಖ್ಯೆಯಲ್ಲಿ ಸರ್ಕಾರಿ ಪಾಲಿಟೆಕ್ನಿಕ್, ಎಚ್‌ಕೆಇ, ಕೆಸಿಟಿ, ಎನ್. ಪಾಲಿಟೆಕ್ನಿಕ್, ಶೆಟ್ಟಿ ಪಾಲಿಟೆಕ್ನಿಕ್, ಆರ್. ಎಂ, ಎನ್‌ಇಎಸ್ ಪಾಲಿಟೆಕ್ನಿಕ್, ಬಾಲಾಜಿ ಪಾಲಿಟೆಕ್ನಿಕ್ ಹಾಗೂ ಇಮ್ರಾನ್ ಪಾಲಿಟೆಕ್ನಿಕ್ ಎಲ್ಲ ವಿದ್ಯಾರ್ಥಿಗಳು ಭಾಗವಹಿಸಬೇಕೆಂದು ಸಂಚಾಲಕ ಪ್ರಭುಲಿಂಗ ಗೊಬ್ಬೂರ್ ಕೋರಿದ್ದಾರೆ.