ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿಶ್ವಕರ್ಮ ಸಮಾಜದಿಂದ ಸಂಭ್ರಮಾಚರಣೆ

Lingaraj Badiger
Updated On : 17 Jul 2013, 11:12 am

ಸುರಪುರ: ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ ರಾಜ್ಯ ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ಅಭಿವೃದ್ಧಿ ನಿಗಮ ರಚನೆ ಮಾಡಿರುವ ಹಿನ್ನೆಲೆಯಲ್ಲಿ ವಿಶ್ವಕರ್ಮ ಸಮಾಜ ಬಾಂಧವರು ಪಟ್ಟಣದಲ್ಲಿ ಹರ್ಷಾಚರಣೆ ಮಾಡಿದರು. ಪಟ್ಟಣದ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಮಾತನಾಡಿ, ವಿಶ್ವಕರ್ಮ ಸಮಾಜ ಬಾಂಧವರು ರಾಜ್ಯದಲ್ಲಿ 35 ಲಕ್ಷ ಜನಸಂಖ್ಯೆ ಹೊಂದಿದ್ದು, ಪಂಚ ಕಸಬುಗಳನ್ನೇ ತಮ್ಮ ಕುಲಕಸಬನ್ನಾಗಿಸಿಕೊಂಡು ಇವುಗಳನ್ನೇ ನಂಬಿದ ಸಮಾಜ ಬಾಂಧವರು ತಮ್ಮ ಬದುಕು ಕಟ್ಟಿಕೊಳ್ಳಲು ಅವಿರತ ಪರಿಶ್ರಮಪಡುತ್ತಿದ್ದಾರೆ ಎಂದರು.
ಸಮಾಜದ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿಯವರ ನೇತೃತ್ವದಲ್ಲಿ ಸುಮಾರು ವರ್ಷಗಳಿಂದ ರಾಜಿರಹಿತ ಹೋರಾಟ ಮಾಡುತ್ತಲೇ ಬಂದಿರುವ ಫಲವಾಗಿ, ಇಂದು ಮುಖ್ಯಮಂತ್ರಿಗಳು ಅಭಿವೃದ್ಧಿ ನಿಗಮ ರಚನೆ ಘೋಷಣೆ ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ಮಾನಪ್ಪ ಬಡಿಗೇರ, ಅಧ್ಯಕ್ಷ ಮಹೇಶ ಶಾರದಹಳ್ಳಿ, ಮುಖಂಡರಾದ ಕಾಳಪ್ಪ ಶಹಬಾದಿ, ಕೃಷ್ಣ ಮುಂಡರಗಿ, ಮೌನೇಶ ಅರ್ಚಕರು, ಮೌನಪ್ಪ ಚನ್ನಪಟ್ಟಣ, ದೇವಿಂದ್ರಪ್ಪ ನಿಡಗುಂದಿ, ದೇವಿಂದ್ರಪ್ಪ ಪತ್ತಾರ, ಮಹೇಶ ಸಗರ, ನಾಗರಾಜ ಮ್ಯಾಗೇರಿ, ಶಂಕ್ರಪ್ಪ ಪತ್ತಾರ, ಆನಂದ ಲಕ್ಷ್ಮೀಪುರ, ಮಹೇಶ ಕುಂಟೋಜಿ, ಮನೋಹರ ಕಂಚಗಾರ, ವಿನೋದ ಕೋನಾಳ, ಮಹೇಶ ಶಹಬಾದಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement