101 ಕಾಯಿ ಒಡೆದು ಹರಿಕೆ ತೀರಿಸಿದ ಅಭಿಮಾನಿ
ಚಿತ್ತಾಪುರ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಬೇಕೆಂದು ತಾಲೂಕಿನ ಮಲಕೂಡ ಅಭಿಮಾನಿ ಚಂದ್ರಶೇಖರ ಪಾಟೀಲ್ ಗುಲ್ಬರ್ಗ ಶರಣಬಸವೇಶ್ವರ ದೇವಸ್ಥಾನಕ್ಕೆ 101 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಲು ಕಳೆದ ಒಂದು ವರ್ಷದಿಂದ 10 ಸಾವಿರ ಕರ ಪತ್ರ ಮುದ್ರಿಸಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಹಾಗೂ ರಾಹುಲ್ ಗಾಂಧಿ , ಪ್ರಾಧಾನ ಮಂತ್ರಿ ಮನಮೋಹನ್ ಸಿಂಗ್, ಮದುಸೂಧನ ಮೆಸ್ತ್ರಿ, ವೀರಪ್ಪ ಮೋಯ್ಲಿ ವಯ್ಯಾಲ್ ರವಿ, ಗುಲಾಂನಬಿ ಆಜಾದ, ರಾಜ್ಯ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹಾಗೂ ರಾಜ್ಯ ಮುಖಂಡರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಕರಪತ್ರ ಹಂಚಿ ಪ್ರಚಾರ ಮಾಡಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯ ಜಯಗಳಿಸಿ ಮುಂದಿನ ಮುಖ್ಯಮಂತ್ರಿ ಆಗಲು ಗುಲ್ಬರ್ಗ ಶರಣಬಸವೇಶ್ವರ ದೇವಾಸ್ಥಾನಕ್ಕೆ 101 ತೆಂಗಿನಕಾಯಿ ಒಡೆದು ಹರಕೆ ತಿರಿಸುವುದಾಗಿ ಬೇಡಿಕೊಂಡಿದ್ದರು.