22ರಂದು ಮಾತಾ ಮಾಣಿಕೇಶ್ವರಿ ದರ್ಶನ
ಗುಲ್ಬರ್ಗ: ಸೇಡಂ ತಾಲೂಕಿನ ಯಾನಾಗುಂದಿಯಲ್ಲಿ ಮಾತಾ ಮಾಣಿಕೇಶ್ವರಿ ಮಾತಾಜಿ ಅವರ 80ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಜು.22ರಂದು ಭಕ್ತಾದಿಗಳಿಗೆ ದಿವ್ಯ ದರ್ಶನ ನೀಡಲಿದ್ದಾರೆ. ಬಂದಂತಹ ಭಕ್ತರಿಗೆ ಟ್ರಸ್ಟ್ ವತಿಯಿಂದ ದಾಸೋಹ ಪ್ರಸಾದ, ನೀರಿನ ಮತ್ತು ಬಸ್ಸಿನ ಸೌಕರ್ಯ ಒದಗಿಸಲಾಗುತ್ತಿದ್ದು, ಅಂದು ಬೆಳಗ್ಗೆ ಮಾತಾಜಿ ಅವರ ಪಾದಪೂಜೆ, ಧ್ಯಾನ, ನಾಮಸ್ಮರಣೆ, ಭಜನೆ ಕಾರ್ಯಕ್ರಮಗಳು ನಡೆಯಲಿವೆ. ಬರುವ ಮಹಿಳಾ ಭಕ್ತಾದಿಗಳು ಸರಳ್ಳತನ ತಪ್ಪಿಸುವುದಕ್ಕೆ ತಮ್ಮ ಆಭರಣಗಳನ್ನು ಧರಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಟ್ರಸ್ಟ್ ಪ್ರಕಟಣೆ ಮೂಲಕ ಮನವಿ ಮಾಡಿದೆ.
ಶಾಲಾ ಮಕ್ಕಳಿಂದ ಸಂತ್ರಸ್ತರಿಗೆ ದೇಣಿಗೆ
ಚಿತ್ತಾಪುರ: ಪಟ್ಟಣದ ಸಾಯಿ ಕಿರಿಯ ಪ್ರಾಥಮಿಕ ಶಾಲೆ ಮಕ್ಕಳಿಂದ ಉತ್ತರಾಖಂಡದ ನೆರೆ ಪೀಡಿತರಿಗೆ 1111 ದೇಣಿಗೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಪ್ರಧಾನಮಂತ್ರಿ ಸಂತ್ರಸ್ತರ ನಿಧಿಗೆ ದೇಣಿಗೆ ನೀಡಲಾಯಿತು. ದೇಣಿಗೆ ಡಿ.ಡಿ.ಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಂಕರ ಮೋದಲೆ ಅವರಿಗೆ ನೀಡಿದ ನರಹರಿ ಕುಲಕರ್ಣಿ ಅವರು, ನಮ್ಮ ಶಾಲೆಯ ಮಕ್ಕಳು ಹಾಗೂ ಸಿಬ್ಬಂದಿ ವರ್ಗದವರು ಸ್ವ ಇಚ್ಛೆಯಿಂದ ಉತರಾಖಂಡನಲ್ಲಿ ನೆರೆ ಹಾವಳಿಯಲ್ಲಿ ತೊಂದರೆ ಪಡುತ್ತಿರುವರ ಸಂತ್ರಸ್ತರಿಗೆ ನೆರವು ನೀಡಿದರು. ನಿವೃತ್ತ ಶಿಕ್ಷಕ ಶಾಮರಾವ ಗಾರಂಪಳ್ಳಿ, ಶಿಕ್ಷಣ ಸಂಯೋಜಕ ಸುಭಾಶ್ಚಂದ್ರ, ಶಿಕ್ಷಕರಾದ ಜಗದೇವ ದಿಗ್ಗಾಂವಕರ್, ಶ್ರೀದೇವಿ, ಸುನಿತಾ, ಸರಸ್ವತಿ, ಭಾಗ್ಯಶ್ರೀ, ಲಕ್ಷ್ಮಿ ಕುಲಕರ್ಣಿ ಇದ್ದರು.
ಇಂದು ಕಾರ್ಯಾಗಾರ
ಗುಲ್ಬರ್ಗ: ನಿರ್ಮಲ ಭಾರತ ಅಭಿಯಾನ ರ್ಕಾರ್ಯಕ್ರಮದಡಿ 2013- 14ನೇ ಸಾಲಿಗೆ ಜಿಲ್ಲೆಯ ಎಲ್ಲ ತಾಲೂಕುಗಳಿಂದ 22 ಗ್ರಾಮ ಪಂಚಾಯಿತಿಗಳನ್ನು ಬಯಲು ಮುಕ್ತ ಗ್ರಾಮ ಪಂಚಾಯತಿಗಳನ್ನಾಗಿ ಮಾಡಲು ಜಲನಿರ್ಮಲ ಯೋಜನೆ ಮತ್ತು ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜು.18 ರಂದು ಬೆಳಿಗ್ಗೆ 11ಕ್ಕೆ ಜಿಲ್ಲಾ ಪಂಚಾಯತ್ ಹಳೆ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಲ್ಲವಿ ಆಕುರಾತಿ ತಿಳಿಸಿದ್ದಾರೆ.
ವರ್ಗಾವಣೆ ಪ್ರಕ್ರಿಯೆ
ಗುಲ್ಬರ್ಗ: ಸಾರ್ವಜನಿಕ ಶಿಕ್ಷಣ ಇಲಾಖೆಯು 2013-14ನೇ ಸಾಲಿನ ಘಟಕದೊಳಗಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಪ್ರಾರಂಭಿಸಿದೆ. ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ದಿನಾಂಕ, ಹುದ್ದೆಗಳ ವಿವರ, ಕೌನ್ಸೆಲಿಂಗ್ ನಿಗದಿಪಡಿಸಿದ ಸಂಖ್ಯೆಯ ವಿವರ ಇಂತಿದೆ. ಆ.7 ಮುಖ್ಯೋಪಧ್ಯಾಯರು, 1ರಿಂದ 110. ಆ. 7ಪಿಇಟಿ ಟೀಚರ್-01 ರಿಂದ 4. ಆ. 7 ಎ.ಎಂ, 01 ರಿಂದ 300. ಸೆ. 7, 301 ರಿಂದ 650. ಅಕ್ಟೋಬರ್ 7 ಎ.ಎಮ್, 650 ರಿಂದ 1050 ಹಾಗೂ ನವೆಂಬರ್ 7, 1051 ರಿಂದ 1518ರವರೆಗೆ.