ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

26 ಇಲಾಖೆಯ 34 ಸ್ಥಾನಕ್ಕೆ 60 ನಾಮಪತ್ರ ಸಲ್ಲಿಕೆ

Lingaraj Badiger
Updated On : 18 Jul 2013, 11:08 am

ಕನ್ನಡಪ್ರಭ ವಾರ್ತೆ, ಆಳಂದ, ಜು.17
ಬರುವ 22ರಂದು ನಡೆಯುವ ಕರ್ನಾಟಕ ಸರ್ಕಾರಿ ನೌಕರರ ತಾಲೂಕು ಸಂಘದ ಚುನಾವಣೆಗೆ ಸಂಬಂಧಿಸಿದಂತೆ ಒಟ್ಟು 26 ಇಲಾಖೆಯ ಎಪಿಎಂಸಿ ಹೊರತುಪಡಿಸಿ 34 ಸ್ಥಾನಗಳಿಗೆ ಸ್ಪರ್ಧೆ ಬಯಸಿ ಸೋಮವಾರ 60 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.  
ಎಪಿಎಂಸಿ ಇಲಾಖೆಯಿಂದ ಯಾರೊಬ್ಬರು ನಾಮಪತ್ರ ಸಲ್ಲಿಸಿಲ್ಲ. ಹೀಗಾಗಿ ಸರ್ಕಾರಿ ವಿವಿಧ 25 ಇಲಾಖೆಯ ನೌಕರರು ಚುನಾವಣೆ ಬಯಸಿ ನಾಮಪತ್ರ ಸಲ್ಲಿಸಿದ್ದರಾದರು ಮಂಗಳವಾರ ನಾಮಪತ್ರ ಮರಳಿ ಪಡೆಯುವ ಕೊನೆಯದಿನವಾಗಿದ್ದರಿಂದ ಅನೇಕರು ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡ ಹಿನ್ನೆಲೆಯಲ್ಲಿ 29 ಸ್ಥಾನಗಳಿಗೆ 29 ಅಭ್ಯರ್ಥಿಗಳು ಅವಿರೋಧ ಆಯ್ಕೆಗೊಂಡರು.
5 ಸ್ಥಾನಗಳಿಗೆ ಮಾತ್ರ: ಅಲ್ಲದೆ, ಪ್ರಾಥಮಿಕ ಶಿಕ್ಷಣದ 4ಸ್ಥಾನ ಹಾಗೂ ಕೃಷಿ ಇಲಾಖೆಯ 1 ಸೇರಿ 5 ಸ್ಥಾನಗಳಿಗೆ ಮಾತ್ರ ಚುನಾವಣೆ ಕೈಗೊಳ್ಳಲಾಗುವುದು ಎಂದು ಚುನಾವಣಾಧಿಕಾರಿಗಳು ಘೋಷಿಸಿದ್ದಾರೆ. 26 ವಿವಿಧ ಸರ್ಕಾರಿ ಇಲಾಖೆಯ ವ್ಯಾಪ್ತಿಯಲ್ಲಿನ ಸ್ಥಾನಗಳ ಅನುಸಾರವಾಗಿ ಅಭ್ಯರ್ಥಿಗಳಿಗೆ ಚುನಾಯಿಸಿ ಸಂಘಕ್ಕೆ ಆಯ್ಕೆ ಮಾಡಿಕೊಡಬೇಕು. ನಂತರ ಆಯ್ಕೆಯಾಗಿ ಬಂದ ಅಭ್ಯರ್ಥಿಗಳಲ್ಲಿ ಸಂಘದ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಆಯ್ಕೆ ನಡೆಯುತ್ತದೆ.  
ಅಭ್ಯರ್ಥಿಗಳ ಅವಿರೋಧ ಆಯ್ಕೆ: ಕಂದಾಯ 2 ಸ್ಥಾನಗಳಿಗೆ ನಾಗರಾಜ ಮತ್ತು ಬಸವಂತಪ್ಪ, ಪಿಡಬ್ಲೂಡಿ ಚಂದ್ರಕಾಂತ ಶಿವಶರಣಪ್ಪ, ಪಂಚಾಯತ್ ರಾಜ್ಯ ಎಂಜಿನಿಯರಿಂಗ್ ಇಲಾಖೆಯ ಬಸವರಾಜ ಜಮಖಂಡಿ, ಪದವಿ ಕಾಲೇಜಿಗೆ ದೇವಿಚಂದ್ರ ರಾಠೋಡ, ಅರಣ್ಯ ಇಲಾಖೆಯ ಕಾಶಿನಾಥ ಅಮೃತಪ್ಪ, ಅಬಕಾರಿ ಇಲಾಖೆಗೆ ರಾಜಕುಮಾರ್, ಕೈಗಾರಿಕಾ ಇಲಾಖೆ ಜಾಫರ್ ಖಾಸೀಂ ಅನ್ಸಾರಿ, ಆರೋಗ್ಯ 4ಸ್ಥಾನಗಳಿಗೆ ರಾಚಪ್ಪ ಬಿ.ಖರ್ಜಗಿ, ಶಬ್ಬಿರ್ ಪಟೇಲ್, ಗಣಪತಿ ಮತ್ತು ಶ್ರೀಕಾಂತ ಭೂಸನೂರ್, ತೋಟಗಾರಿಕೆಗೆ ಟಿ. ಅಂಜಯನೆಯ, ರೇಷ್ಮೆ ಶರಣಬಸಪ್ಪ ಕಾಂಬಳೆ, ಸಾರಿಗೆ ಸಂಸ್ಥೆಯ ಈರಣ್ಣ, ಉಪಖಾಜಾನೆ ಬಾಬು ಕೋಬಾಳಕರ್, ಭೂಮಾಪನ ದತ್ತಾತ್ರೇಯ ಎಸ್. ಬಬಲಾದ, ಉಪನೋಂದಣಿ ಇಲಾಖೆಯ ಅನುರಾಧಾ ಕಿನ್ನಾಳ, ನ್ಯಾಯಾಂಗ ಶ್ರೀಶೈಲ್ ಬಿ. ಪಾಟೀಲ್, ಸಿಡಿಪಿಓ ಭಾಗೀರಥಿ ಎಂ. ಯಲಶೆಟ್ಟಿ, ಸಹಕಾರ ಸಂಘ ಲೇಖ ಪರಿಶೋಧನ ಇಲಾಖೆ ಸುರೇಖಾ ಶ್ರೀಕಾಂತ ಯಾದಗಿರಿ, ಶಿಕ್ಷಣಾಧಿಕಾರಿ ಕಚೇರಿ ಲೋಕಪ್ಪ ಜಾಧವ, ಸಮಾಜ ಕಲ್ಯಾಣ ಕಮಲಾಬಾಯಿ ತಮ್ಮನ್, ಪ.ಪೂ, ಶಿಕ್ಷಣ ರಮೇಶ ಮಾಡಿಯಾಳ, ಪ್ರೌಢ ಶಿಕ್ಷಣ ವಿಭಾಗದಿಂದ ಧರ್ಮರಾಯ ಕೊರಳ್ಳಿ ಮತ್ತು ಮಾಣಿಕ ಎನ್. ಜಾಧವ, ಪಶು ಸಂಗೋಪನಾ 2 ಸ್ಥಾನಕ್ಕೆ ಜಗನಾಥ ಕುಂಬಾರ ಮತ್ತು ನಿಲಪ್ಪ ಚಿಂಚೂರೆ ಅವಿರೋಧ ಆಯ್ಕೆಯಾಗಿದ್ದಾರೆ.
ಕಣದಲ್ಲೂಳಿದ ಅಭ್ಯರ್ಥಿಗಳು: ಕೃಷಿ ಮತ್ತು ಪ್ರಾಥಮಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಚುನಾವಣೆ ನಡೆಯಲಿದೆ. ಪ್ರಾಥಮಿಕ ಶಿಕ್ಷಣ ಇಲಾಖೆಯ 4ಸ್ಥಾನಗಳಿಗೆ ಚಂದ್ರಶೇಖರ, ರೇವಣಸಿದ್ಧಪ್ಪ ನಿಂಬಾಳ, ಶಿವಾನಂದ ಹರವಾಳ, ಕಮಲಾಬಾಯಿ, ಅರ್ಜುನ ಟಿ. ಹತ್ತಿ, ಅಂಬಾರಾಯ ಬಿ, ಸಿದ್ಧಣ್ಣ ಆರ್. ಪಾಟೀಲ್, ಬಸವರಾಜ ಹತ್ತರಕಿ, ರಮೇಶ ಸಕ್ಕರಗಿ ಸ್ಪರ್ಧಿಸಿದ್ದಾರೆ. ಕೃಷಿ ಇಲಾಖೆಯ 1ಸ್ಥಾನಕ್ಕೆ ಷಣ್ಮಖಯ್ಯ ಮಠಪತಿ ಮತ್ತು ಭೀಮಣ್ಣ ಹೋಳ್ಕರ್ ಕಣದಲ್ಲಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಹೆಚ್ಚು ಶಿಕ್ಷಕರು ನಾಮಪತ್ರ ಸಲ್ಲಿಸಿರುವುದರಿಂದ ಚುನಾವಣೆ ಕಣಸಿದ್ಧಗೊಂಡಿದೆ. ಅತಿ ಹೆಚ್ಚು ಮತದಾರರಿರುವ ಪ್ರಾಥಮಿಕ ವಿಭಾಗದಿಂದ 1312 ಮಂದಿ ಮತದಾರರು ಇದ್ದು, ಉಳಿದ ಇಲಾಖೆಗೆ ಹೋಲಿಸಿದರೆ ಶಿಕ್ಷಣ ಇಲಾಖೆಯಲ್ಲಿಯೇ ಹೆಚ್ಚಿನ ಪೈಪೋಟಿ ಕಂಡುಬರುತ್ತಿದೆ. ಅದರಲ್ಲೂ ಪ್ರಾಥಮಿಕ ಶಾಲಾ ಶಿಕ್ಷಕರಲ್ಲಿ ಅಧಿಕ ಉತ್ಸಾಹ ಎದ್ದುಕಂಡಿರುವುದು ಈ ಸಲದ ಚುನಾವಣೆಯ ವಿಶೇಷವಾಗಿ ಕಂಡಿದೆ. ಚುನಾವಣಾಧಿಕಾರಿಯಾಗಿ ನಿವೃತ್ತ ಶಿಕ್ಷಕ ಅಮೃತ ಹಿರೋಳಿ, ಸ. ಚುನಾವಣಾಧಿಕಾರಿ ಶಿವಾನಂದ ಜಾನೆ ಕಾರ್ಯನಿರ್ವಹಿಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement