ಅಕ್ರಮ ಕಟ್ಟಡಗಳ ನೆಲಸಮ
ಜೇವರ್ಗಿ: ಪಟ್ಟಣದ ಸಂತೆ ಆವರಣದಲ್ಲಿ ಅಕ್ರಮವಾಗಿ ಕಟ್ಟಲಾದ ಕಟ್ಟಡಗಳನ್ನು ಸ್ಥಳೀಯ ಪಟ್ಟಣ ಪಂಚಾಯತ್ ಗುರುವಾರ ನೆಲಸಮ ಗೊಳಿಸಿತು. ಸರ್ಕಾರಿ ಸ್ಥಳದಲ್ಲಿ ಅಕ್ರಮಿಸಿಕೊಂಡ ಕಟ್ಟಡಗಳನ್ನು ತೆರವುಗೊಳಿಸುವಂತೆ ಅನೇಕ ಬಾರಿ ಪಂಚಾಯತ್ ಅಧಿಕಾರಿಗಳು ಮೌಖಿಕವಾಗಿ ತಿಳಿಸಿದರು ತೆರವುಗೊಳ್ಳದೇ ಇರುವುದರಿಂದ ಗುರುವಾರ ಜೆಸಿಬಿ ಯಂತ್ರದ ಮೂಲಕ ನೆಲಸಮ ಗೊಳಿಸಿದರು.
ಈಗಾಗಲೇ ಅಕ್ರಮಗೊಂಡ ಸ್ಥಳದಲ್ಲಿ ಮಟನ್ ಮಾರ್ಕೆಟ್ ಹಾಗೂ ಇನ್ನಿತರ ಮಳಿಗೆಗಾಗಿ ಟೆಂಡರ್ ಕರೆಯಲಾಗಿದೆ. ನೂತನ ಮಳಿಗೆಗಳ ನಿರ್ಮಾಣಕ್ಕಾಗಿ ಪಟ್ಟಣ ಪಂಚಾಯತಿ ಇಲಾಖೆ ಅಕ್ರಮಗೊಂಡ ಸ್ಥಳವನ್ನು ತಮ್ಮ ಸುಪರ್ದಿಗೆ ಪಡೆಯುವ ಮೂಲಕ ದಿಟ್ಟ ಹೆಜ್ಜೆ ಇಟ್ಟಿದೆ. ಪಟ್ಟಣದ ಹೃದಯ ಭಾಗದಲ್ಲಿರುವ ಈ ಸ್ಥಳದಲ್ಲಿ ರಸ್ತೆಯ ಅಕ್ಕಪಕ್ಕ ಮೋಸದ ಅಂಗಡಿಗಳು, ಮಳಿಗೆಗಳ ನಿರ್ಮಾಣದ ನಂತರ ಒಳಭಾಗದಲ್ಲಿ ಒಂದೆಡೆ ಸರಿಸಿ, ಶುದ್ಧ ವಾತಾವರಣ ನಿರ್ಮಾಣವಾಗಲಿ ಎಂಬುವುದೇ ಬಡವಾಣೆಯ ಹಾಗೂ ಪಟ್ಟಣದ ಜನತೆಯ ಮಹಾದಾಸೆಯಾಗಿದೆ.
ಜಂಗಮಶೆಟ್ಟಿ ನಿಧನಕ್ಕೆ ಕಸಾಪ ಸಂತಾಪ
ಗುಲ್ಬರ್ಗ: ನೀರಾವರಿ ಇಲಾಖೆಯ ನಿವೃತ್ತ ಎಂಜಿನಿಯರ್ ಎಸ್.ಬಿ. ಜಂಗಮಶೆಟ್ಟಿ ಅವರ ನಿಧನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ಸೂಚಿಸಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರೂ ಆಗಿದ್ದ ಜಂಗಮಶೆಟ್ಟಿ ಅವರನ್ನು ಈಚೇಗೆ ಬಿಜಾಪುರದಲ್ಲಿ ನಡೆದ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿಸಲಾಗಿತ್ತು. ರಂಗಕರ್ಮಿ ಡಾ. ಸುಜಾತಾ ಜಂಗಮಶೆಟ್ಟಿ ಅವರ ತಂದೆ ನಿಧನಕ್ಕೆ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮುನ್ನೂರ, ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಬಿ.ಎಚ್. ನಿರಗುಡಿ, ಕೋಶಾಧ್ಯಕ್ಷ ಡಾ. ರಾಜೇಂದ್ರ, ಶಂಕರ, ಪ್ರೊ. ಭುವನೇಶ್ವರಿ, ಸೂಳ್ಳದ್ ಸಂತಾಪ ಸೂಚಿಸಿದ್ದಾರೆ.