ಜೇವರ್ಗಿ; ಅವಿರೋಧ ಆಯ್ಕೆ
ಜೇವರ್ಗಿ: ತಾಲೂಕು ಸರ್ಕಾರಿ ನೌಕರರ ಸಂಘದಿಂದ ಹಲವಾರು ನೌಕರರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಕಾಶ ಜೋಶಿ, ಆನಂದ, ಟಿಪ್ಪು ಸುಲ್ತಾನ್(ಕಂದಾಯ ಇಲಾಖೆ), ಡಿ.ಬಿ. ಪಾಟೀಲ್(ಆಹಾರ ಇಲಾಖೆ), ಭೀಮರಾಯ ಕನ್ನೋಳ್ಳಿ (ಭೂಮಾಪನಾ), ದೇವಿಂದ್ರಪ್ಪ ಪಾಟೀಲ್(ನ್ಯಾಯಾಲಯ), ಮುದಗಲರಾವ ಕುಲಕರ್ಣಿ(ಕೃಷಿ ಇಲಾಖೆ), ಭೀಮರಾವ (ಅಬಕಾರಿ), ರಾಜಶೇಖರ. ಡಿ (ಲೋಕೋಪಯೋಗಿ), ರೇವಣಸಿದ್ದಪ್ಪ, ಹಣಮಂತರಾಯ (ತಾಪಂ), ಎಸ್.ಎಂ. ಬೋನಾಳ (ಪಪುಕಾಲೇಜು), ಕೇಶವ ಕಟ್ಟಿಮನಿ (ರೇಶ್ಮೆ), ಮಾನು ಪವಾರ (ಅರಣ್ಯ), ಭೀಮರೆಡ್ಡಿ ಪಾಟೀಲ್ (ಖಜಾನೆ), ಎಂ.ಡಿ. ಅಬ್ದುಲ್ ಅಜೀಮ್ (ಸಾರ್ವಜನಿಕ ಆಸ್ಪತ್ರೆ), ಶಿವರಾಜ, ಶ್ರೀಶೈಲ್ ಅರಳಗುಂಡಗಿ, ಅಶೋಕ ಕಲಶೆಟ್ಟಿ (ಆರೋಗ್ಯ ಇಲಾಖೆ), ಸಂಜೀವಕುಮಾರ ಗುಡಿಮನಿ (ತೋಟಗಾರಿಕೆ ಇಲಾಖೆ), ವಿರುಪ್ಪಾಕ್ಷಿ ಹಿರೇಗೌಡ (ಬಿಸಿಎಂ), ಧರೇಪ್ಪಗೌಡ (ಸಮಾಜ ಕಲ್ಯಾಣ), ಬಸವರಾಜ (ಕೃಷಿ ಉತ್ಪನ್ನ), ಮಲ್ಲಿಕಾರ್ಜುನ ಯರಗಲ್ (ಜಲಾನಯನ), ಬಸಣ್ಣಗೌಡ ಪಾಟೀಲ್(ಕೈಗಾರಿಕೆ), ಅಶೋಕಕುಮಾರ್ (ಪಶು ಸಂಗೋಪನೆ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜನಸಂಖ್ಯಾ ದಿನಾಚರಣೆ
ಗುಲ್ಬರ್ಗ: ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಆಚರಿಸಲಾಯಿತು. ಸಮಾಜಶಾಸ್ತ್ರದ ಹಿರಿಯ ಶಿಕ್ಷಕಿ ಪಿ. ಉಮಾ ಅವರು ಜನಸಂಖ್ಯಾ ಸ್ಫೋಟದಿಂದ ಆಗುವ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರು. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನವ ವಿವಾಹಿತರಿಗೆ ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಮಾಹಿತಿ ನೀಡಬೇಕು ಮತ್ತು ಪ್ರತಿಯೊಬ್ಬರು ಶಿಕ್ಷಣ ಪಡೆದು ತಮ್ಮ ಜವಾಬ್ದಾರಿ ಅರಿತು ಮುಂದೆ ಸಾಗಬೇಕು ಎಂದರು. ಶಾಲೆಯ ಪ್ರಾಚಾರ್ಯ ಪಿ. ರೋಷನ್ ಅಧ್ಯಕ್ಷತೆ ವಹಿಸಿದ್ದರು.