ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ನಿರ್ಮಲ' ಅನುಷ್ಠಾನಕ್ಕೆ ಸಹಕಾರ ಅಗತ್ಯ: ಕುಳ್ಳಪ್ಪ

Lingaraj Badiger
Updated On : 19 Jul 2013, 11:42 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.18
ಬಯಲು ಮುಕ್ತ ಮಲ ವಿಸರ್ಜನೆ ರಾಜ್ಯವನ್ನಾಗಿಸುವ ನಿಟ್ಟಿನಲ್ಲಿ ಆಯವ್ಯಯದಲ್ಲಿ ಹಣವನ್ನು ಮೀಸಲಿರಿಸಿ, ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದ ದೇಶದ ಮೊಟ್ಟ ಮೊದಲ ರಾಜ್ಯ ಕರ್ನಾಟಕ ಎಂದು ವಿಶ್ವಬ್ಯಾಂಕ್ ಸದಸ್ಯ ಕುಳ್ಳಪ್ಪ ಹೇಳಿದರು.
ನಗರದ ಹಳೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ನಿರ್ಮಲ ಭಾರತ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ಆಯೋಜಿಸಲಾಗಿದ್ದ ಒಂದು ದಿನದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಮಾತನಾಡಿದರು.
ದೇಶಕ್ಕೆ ಮಾದರಿ ಜಿಲ್ಲೆಗಳು: ಸ್ವಚ್ಛತೆ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ದೇಶಕ್ಕೆ ಮಾದರಿ ಎನಿಸುವ ಜಿಲ್ಲೆಗಳಿವೆ. ಹಾಗೇಯೇ ಅದಕ್ಕೆ ವ್ಯತಿರಿಕ್ತವಾದ ಜಿಲ್ಲೆಗಳು ಇವೆ. ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಗುಲ್ಬರ್ಗವನ್ನು ಮಾದರಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಜಿಲ್ಲೆಯ 20 ಗ್ರಾಪಂಗಳನ್ನು ಬಯಲು ಮುಕ್ತ ಶೌಚಾಲಯವನ್ನಾಗಿ ಮಾಡಲು ಗ್ರಾಪಂನಲ್ಲಿ ನಿರ್ಮಲ ಭಾರತ ಅಭಿಯಾನದಡಿಯಲ್ಲಿ ಉತ್ತಮ ಪ್ರಗತಿ ಸಾಧಿಸಲು ಮತ್ತು ಸೂಕ್ತ ಕಾರ್ಯ ತಂತ್ರಗಳನ್ನು ರೂಪಿಸಲು ಜಲ ನಿರ್ಮಲ ಯೋಜನೆಯ ಸಹಯೋಗದಲ್ಲಿ ಈ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಗುಂಪುಗಳನ್ನು ರಚಿಸಿಕೊಳ್ಳಿ: ಈ ಕಾರ್ಯಾಗಾರದಲ್ಲಿ ಸಂಬಂಧಿಸಿದ ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಹಾಗೂ ಅಧಿಕಾರಿಗಳು ಬಯಲು ಮುಕ್ತ ಶೌಚ ಗ್ರಾಮನ್ನಾಗಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳು, ಅದರ ವಿವರ, ಶೌಚಾಲಯ ನಿರ್ಮಿಸಲು ಎದುರಾಗಿರುವ ಸಮಸ್ಯೆಗಳು ಅದರ ಪರಿಹಾರಕ್ಕೆ ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳನ್ನು ತಾಲೂಕುವಾರು ಗುಂಪುಗಳನ್ನು ರಚಿಸಿಕೊಂಡು ಚರ್ಚೆ ನಡೆಸಬೇಕು. ಪ್ರತಿದಿನ ಹಮ್ಮಿಕೊಳ್ಳಬೇಕಾಗಿರುವ ಕಾರ್ಯಕ್ರಮಗಳನ್ನು ಪಟ್ಟಿ ಮಾಡಿಕೊಂಡು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಿಸಿ ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕೆ ನಿರಂತರ ಸಂಪರ್ಕದಲ್ಲಿದ್ದು, ಅನುಷ್ಠಾನಗೊಳಿಸಲು ಮೇಲುಸ್ತುವಾರಿ ವಹಿಸಬೇಕೆಂದು ಹೇಳಿದರು.
ನಿರ್ಮಲ ಭಾರತ ಅಭಿಯಾನದಲ್ಲಿ ಹೊಸ ಮಾರ್ಗದರ್ಶಿ ಸೂತ್ರಗಳು ಬಂದಿವೆ. ಅವುಗಳನ್ನು ಅರ್ಥಮಾಡಿಕೊಳ್ಳುವಂತೆ ತಿಳಿಸಿದರು. ರಾಜ್ಯ ನೀರು ಹಾಗೂ ನೈರ್ಮಲ್ಯ ಮಿಷನ್‌ನ ಉಪನಿರ್ದೇಶಕರಾದ ಚೇತನ ಗಂಗಾ, ಡಿ.ಸಿ.ಎಂ.ನ. ಉಪ ಕಾರ್ಯದರ್ಶಿ ಸತೀಶ ಉಪಸ್ಥಿತರಿದ್ದರು.
ಜಿಪಂ ಯೋಜನಾ ನಿರ್ದೇಶಕ ಕೆಂಚಣ್ಣನವರ್ ಪ್ರಾಸ್ತಾವಿಕ ಮಾತನಾಡಿದರು. ಶಶಿಧರ ಗುತ್ತೇದಾರ ಸ್ವಾಗತಿಸಿದರು. ನಿರ್ಮಲ ಭಾರತ ಯೋಜನೆಯ ರಾಜ್ಯ ಸಂಯೋಜಕಿ ಅನ್ನಪೂರ್ಣ ಅಭಿಯಾನ ಕಾರ್ಯಕ್ರಮ ಕುರಿತ ಮಾಹಿತಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement