ಇಂಗಳಗಿ(ಬಿ) ಗ್ರಾಮದ ಯುವತಿ ನಾಪತ್ತೆ
ಗುಲ್ಬರ್ಗ: ಅಫಜಲ್ಪುರ ತಾಲೂಕಿನ ಇಂಗಳಗಿ(ಬಿ) ಗ್ರಾಮದ ಭಾಗ್ಯಶ್ರೀ ತಂದೆ ನಾಗೇಶ ಜಮಾದಾರ ಜು.6ರಂದು ರಾತ್ರಿ 3ಕ್ಕೆ ಮನೆಯಿಂದ ಹೊರಹೋದವರು ಇದುವರೆಗೆ ಮರಳಿ ಮನೆಗೆ ಬಂದಿಲ್ಲ. ಈ ಕುರಿತು ಈ ಮಹಿಳೆಯ ತಾಯಿ ಗಂಗಮ್ಮ ಅವರು ರೇವೂರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
17 ವಯಸ್ಸಿನ ಭಾಗ್ಯಶ್ರೀ ದುಂಡು ಮುಖ, ಕಪ್ಪು ಮೈಬಣ್ಣ, ಸದೃಢ ಮೈಕಟ್ಟು ಹೊಂದಿದ್ದು, ಅಂದಾಜು 4.6 ಅಡಿ ಎತ್ತರವಿದ್ದಾರೆ. ಕನ್ನಡ ಭಾಷೆ ಮಾತನಾಡುತ್ತಾರೆ, ತೆಲಗು ಭಾಷೆ ಅರ್ಥ ಮಾಡಿಕೊಳ್ಳುತ್ತಾರೆ. ಈ ಮಹಿಳೆಯ ಸುಳಿವು ಸಿಕ್ಕಲ್ಲಿ ರೇವೂರ ಪೊಲೀಸ್ ಠಾಣೆಯ ಆರಕ್ಷಕ ಉಪ-ನಿರೀಕ್ಷಕರ ಕಚೇರಿಗೆ ತಿಳಿಸುವಂತೆ ಕೋರಲಾಗಿದೆ.