ಚಿತ್ತಾಪುರಕ್ಕಿಂದು ವಿವೇಕಾನಂದ ರಥಯಾತ್ರೆ
ಚಿತ್ತಾಪುರ: ಪಟ್ಟಣಕ್ಕೆ ಕರ್ನಾಟಕ ಶಾಖೆಯ ರಾಮಕೃಷ್ಣ ಮಠ, ರಾಮಕೃಷ್ಣ ಮಿಷನ್ ಹಾಗೂ ರಾಮಕೃಷ್ಣ ಭಾವ ಪ್ರಚಾರ ಪರಿಷತ್ ವತಿಯಿಂದ ಸ್ವಾಮಿ ವೀವೇಕಾನಂದರ ರಥಯಾತ್ರೆಯು ಜು.20ರಂದು ಮಧ್ಯಾಹ್ನ 2.30ಕ್ಕೆ ಆಗಮಿಸಲಿದೆ. ಮಹಾದೇವಮ್ಮ ಡಿ. ಪಾಟೀಲ್ ಶಾಲೆ ಮುಂದೆ ಸಾರ್ವಜನಿಕರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿ ಸ್ವಾಗತ ಮಾಡಿಕೊಳ್ಳಲಾಗುವುದು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ನಂತರ ಅಕ್ಕ ಮಹಾದೇವಿ ಮಂದಿರದಲ್ಲಿ ಸಮಾರಂಭ ನಡೆಯಲಿದೆ ಎಂದು ಪ್ರಲ್ಹಾದ ವಿಶ್ವಕರ್ಮ ತಿಳಿಸಿದ್ದಾರೆ.