ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನ್ಯಾಯಬೆಲೆ ಅಂಗಡಿ ಅಮಾನತು

Lingaraj Badiger
Updated On : 20 Jul 2013, 11:17 am

ಯಾದಗಿರಿ: ಪಡಿತರ ಸಾಮಗ್ರಿ ವಿತರಣೆಯಲ್ಲಿ ಲೋಪ ಎಸಗಿರುವ ಆರೋಪದ ಹಿನ್ನೆಲೆಯಲ್ಲಿ ತಾಲೂಕಿನ ಮುಷ್ಟೂರು ಗ್ರಾಮದ ಹುಸೇನ್ ಸಾಬ್ ದರ್ಗಾ ಮಹಿಳಾ ಮಂಡಳ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಿ, ಜಿಲ್ಲಾಧಿಕಾರಿಯವರು ಆದೇಶಿಸಿದ್ದಾರೆ. ಪಡಿತರ ಸಾಮಗ್ರಿ ವಿತರಣೆಯಲ್ಲಿ ಕೆಲವು ಲೋಪದೋಷಗಳು ಎಸಗಿರುವ ಬಗ್ಗೆ ಗ್ರಾಮದ ಪಡಿತರ ಚೀಟಿದಾರರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ಈ ನ್ಯಾಯಬೆಲೆ ಅಂಗಡಿ ಬಗ್ಗೆ ಸ್ಥಾನಿಕ ವಿಚಾರಣೆ ನಡೆಸಿದೆ. ಪಡಿತರ ವಸ್ತುಗಳ ವಿತರಣೆಯಲ್ಲಿ ಲೋಪದೋಷ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಕಾರಣ ಈ ನ್ಯಾಯಬೆಲೆ ಅಂಗಡಿಯ ಪ್ರಾಧಿಕಾರವನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಲ್ಲದೇ ನ್ಯಾಯಬೆಲೆ ಅಂಗಡಿದಾರರು ಪಡಿತರ ವಿತರಣೆಯಲ್ಲಿ ಲೋಪವೆಸಗಿದರೆ ಅಂಥ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕಾನೂನಿನ ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಇಲಾಖೆ ಉಪನಿರ್ದೇಶಕರು ಎಚ್ಚರಿಸಿದ್ದಾರೆ.

ಮಾಹಿತಿ ಸಂಗ್ರಹ ಪ್ರಕ್ರಿಯೆಗೆ ತಡೆ
ಯಾದಗಿರಿ: ಡಿಸೆಂಬರ್ 2010ರ ಹಿಂದೆ ನೀಡಲಾದ ಪಡಿತರ ಚೀಟಿ ಫಲಾನುಭವಿಗಳ ಫೋಟೋ ಮತ್ತು ಬಯೋವುಟ್ರಿಕ್ ಮಾಹಿತಿಯನ್ನು ಮತ್ತೊಮ್ಮೆ ಸಂಗ್ರಹಿಸುತ್ತಿರುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಆ.31ರವರೆಗೆ ತಡೆ ಹಿಡಿಯಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಕರು ತಿಳಿಸಿದ್ದಾರೆ. ಬೆರಳಚ್ಚು-ಬಯೋವುಟ್ರಿಕ್ ದೋಷಪೂರಿತವಾಗಿರುವುದರಿಂದ ಅಂತಹ ಕಾಯಂ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಬೆರಳಚ್ಚು ನೀಡಲು ಜಿಲ್ಲೆಯ ಗ್ರಾಪಂ.ಗಳಲ್ಲಿ, ನಗರ ಪ್ರದೇಶದ ಸೇವಾ ಕೇಂದ್ರದಲ್ಲಿ ಬರುತ್ತಿರುವುದರಿಂದ ಆನ್ಲೈನ್ನಲ್ಲಿ ಹೊಸ ಪಡಿತರ ಚೀಟಿ ಕೋರಿ ಅರ್ಜಿ ಸಲ್ಲಿಸಿದವರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ 2010ರ ಡಿಸೆಂಬರ್ರ ಹಿಂದೆ ನೀಡಲಾಗಿರುವ ಕಾಯಂ ಪಡಿತರ ಚೀಟಿದಾರರಿಗೆ 'ಅನ್ನಭಾಗ್ಯ' ಜಾರಿಯಲ್ಲಿ ಅಡಚಣೆಯಿಲ್ಲ. ಕಾರಣ ಬೆರಳಚ್ಚು-ಬಯೋವುಟ್ರಿಕ್ ನೀಡುವ ಅವಶ್ಯಕತೆಯಿಲ್ಲ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement