ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ವಿದ್ಯುತ್ ತಗುಲಿ ವ್ಯಕ್ತಿ ಸಾವು

Lingaraj Badiger
Updated On : 20 Jul 2013, 11:14 am

ಗುಲ್ಬರ್ಗ: ವಿದ್ಯುತ್ ತಗುಲಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಜೇವರ್ಗಿ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದಿದೆ. ಬಾಳು ತಂದೆ ಮೋಟು ರಾಠೋಡ(31) ಮೃತನು. ಗ್ರಾಮದಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ ಇತ ಅಂಗಡಿಯ ಪತ್ರಾದ ಮೇಲೇರಿ ದುರಸ್ತಿ ಮಾಡುತ್ತಿದ್ದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಮೃತಪಟ್ಟಿದ್ದಾನೆ. ಈ ಕುರಿತು ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಸ್ಸಿನಲ್ಲಿಟ್ಟಿದ್ದ ಲ್ಯಾಪ್ಟಾಪ್ ಕಳವು
ಗುಲ್ಬರ್ಗ: ಬಸ್ಸಿನಲ್ಲಿಟ್ಟಿದ್ದ 45 ಸಾವಿರ ಮೌಲ್ಯದ ಲ್ಯಾಪ್ಟಾಪ್ ಮತ್ತು ಶಾಲಾ ದಾಖಲಾತಿಗಳಿದ್ದ ಬ್ಯಾಗ್ ಮಂಗಮಾಯವಾದ ಘಟನೆ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಗುರುವಾರ ರಾತ್ರಿ ನಡೆದಿದೆ.
ಶ್ರೀನಿವಾಸ ಸರಡಗಿಯ ಕಲ್ಪಪ್ಪ ತಂದೆ ಸಾಯಿಬಣ್ಣ ಲ್ಯಾಪ್ಟಾಪ್ ಕಳೆದುಕೊಂಡವನು. ಸೇಡಂ- ಹಾವೇರಿ ಬಸ್ಸಿನಲ್ಲಿ ಪ್ರಯಾಣಿಸಲೆಂದು ಬಸ್ಸಿನ ಸೀಟಿನ ಮೇಲೆ ಲ್ಯಾಪ್ಟಾಪ್ ಮತ್ತು ಶಾಲಾ ದಾಖಲಾತಿಗಳಿದ್ದ ಬ್ಯಾಗ್ ಇಟ್ಟು ಕುಡಿಯುವ ನೀರಿನ ಬಾಟಲಿ ತರಲೆಂದು ಬಸ್ ನಿಲ್ದಾಣದಲ್ಲಿನ ಕ್ಯಾಂಟೀನ್ಗೆ ಹೋಗಿ ವಾಪಸ್ ಬರುವುದರೊಳಗೆ ಕಳ್ಳರು ಲ್ಯಾಪ್ಟಾಪ್ ಮತ್ತು ಶಾಲಾ ದಾಖಲಾತಿಗಳಿದ್ದ ಬ್ಯಾಗ್ ಎತ್ತಿಕೊಂಡು ಹೋಗಿದ್ದಾರೆ.
ಲ್ಯಾಪ್ಟಾಪ್ ಮತ್ತು ಶಾಲಾ ದಾಖಲಾತಿ ಕಳೆದುಕೊಂಡು ಕಂಗಾಲಾಗಿದ್ದ ಕಲ್ಪಪ್ಪ ಅಶೋಕ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ಅಲ್ಯೂಮಿನಿಯಂ ವೈರ್ ಕಳವು
ಗುಲ್ಬರ್ಗ: ಸೇಡಂ- ಚಿಂಚೋಳಿ ರಸ್ತೆಯ ಸಟಪಟನಳ್ಳಿಗೆ ಹೋಗುವ ರಸ್ತೆಯಲ್ಲಿರುವ 5 ಕಂಬಗಳ 1.3 ಕಿಮೀ ಅಲ್ಯೂಮಿನಿಯಂ ವೈರ್ ಕಳವು ಮಾಡಿದ ಕುರಿತು ಜೆಸ್ಕಾಂ ಶಾಖಾಧಿಕಾರಿ ಅಕ್ಬರಸಾಬ್ ನದಾಫ್ ಎಂಬುವರು ಸೇಡಂ ಠಾಣೆಯಲ್ಲಿ ದೂರು ನೀಡಿದ್ದಾರೆ. ಸುಮಾರು 45 ಸಾವಿರ ಮೌಲ್ಯದ ವೈರ್ ಎಂದು ಎಂದು ಅಂದಾಜಿಸಲಾಗಿದೆ.
ವರದಕ್ಷಿಣೆ ತರದಿದ್ರೆ ಇನ್ನೊಂದು ಮದುವೆ!
ಗುಲ್ಬರ್ಗ: ತವರು ಮನೆಯಿಂದ ಇನ್ನೂ ಹೆಚ್ಚಿನ ವರದಕ್ಷಿಣೆ ತರದಿದ್ದಲ್ಲಿ ಮತ್ತೊಂದು ಮದುವೆಯಾಗುವುದಾಗಿ ಪತ್ನಿಗೆ ಬೆದರಿಕೆ ಹಾಕಿದ ಘಟನೆ ಕಮಲಾಪುರ ಠಾಣೆ ವ್ಯಾಪ್ತಿಯ ಸ್ವಂತ ಗ್ರಾಮದಲ್ಲಿ ನಡೆದಿದೆ. ಶಿವರಾಜ ಗೋಗರೆ ಎಂಬಾತ ಪತ್ನಿ ವಿಶಾಖಾ ಅವರಿಗೆ ಬೆದರಿಕೆ ಹಾಕಿದ್ದು, ವಿಶಾಖಾ ಅವರು ಈ ಕುರಿತು ಕಮಲಾಪುರ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement