ಕಂಪನಿ ಮಾಲೀಕರಿಂದ ರೈತರ ಹೋರಾಟ ಹತ್ತಿಕ್ಕುವ ಹುನ್ನಾರ: ಮೈನುದ್ದೀನ್ ಆರೋಪ
ಚಿತ್ತಾಪುರ: ಇಲ್ಲಿಯ ಇಟಗಾ ರಸ್ತೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಒರಿಯಂಟಲ್ ಕಂಪನಿ ಮಾಲೀಕರಿಂದ ರೈತರ ಹೋರಾಟ ಹತ್ತಿಕ್ಕುವ ಹುನ್ನಾರ ನಡೆದಿದೆ ಎಂದು ಜೆಡಿಎಸ್ ಕಾರ್ಮಿಕ ವಿಭಾಗದ ಹಿರಿಯ ಉಪಾಧ್ಯಕ್ಷ ಮೈನ್ನೋದ್ದಿನ್ ಮನ್ಸಬ್ದಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಟಗಾ ಮೊಗಲಾ, ದಿಗ್ಗಾಂವ, ಜಮೀನುಗಳಿಗೆ ಹೆಚ್ಚಿನ ಹಣ ನೀಡಬೇಕೆಂದು ಕಂಪನಿ ಆಡಳಿತ ಮಂಡಳಿ ವಿರುದ್ಧ ಹೋರಾಟ ಮಾಡಲಾಗಿದೆ. ಹೋರಾಟ ಹತ್ತಿಕ್ಕಲು ಹೋರಾಟ ಮಾಡುವ ರೈತರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿದರು.
ಕಂಪನಿಯವರು ಎನ್.ಎ. ಮಾಡದೆ ಕಾಮಾಗಾರಿ ಆರಂಭಿಸಿದ್ದಾರೆ. ತಹಸೀಲ್ದಾರ್ ಎನ್.ಎ. ಆಗುವವರಿಗೆ ಕಾಮಗಾರಿ ಸ್ಥಗಿತಗೊಳಿಸಿ ಎಂದು ತಡೆ ಆಜ್ಞೆ ನೀಡಿದ್ದಾರೆ. ಆದರೆ ಪೊಲೀಸ್ ಸಂಕ್ಷರಣೆಯಲ್ಲಿ ಕಂಪನಿ ಕಾಮಗಾರಿ ಆರಂಭಿಸಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಇಟಗಾ, ಮೋಗಲಾ, ದಿಗ್ಗಾಂವ, ಪ್ರಭಾಕರ್ ಇಟಗಾ ಇದ್ದರು.