ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ವೀರ ಬ್ರಾಹ್ಮಣ' ಸಿನಿಮಾ ಹೆಸರಿಗೆ ವಿರೋಧ

Vishwanath S
Updated On : 21 Jul 2013, 1:20 am

ಗುಲ್ಬರ್ಗ: ಕನ್ನಡ ಚಲನಚಿತ್ರ ನಿರ್ದೇಶಕ ಶ್ರೀನಿವಾಸ ರಾಜು ನಿರ್ದೇಶನದ ಉಪೇಂದ್ರ ನಟಿಸುತ್ತಿರುವ ಕನ್ನಡ ಚಲನಚಿತ್ರ ವೀರ ಬ್ರಾಹ್ಮಣ ಎಂದು ಹೆಸರಟ್ಟಿರುವುದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಇಲ್ಲಿನ ಗಾಯಿತ್ರಿ ಬ್ರಾಹ್ಮಣ ಮಹಿಳಾ ಟ್ರಸ್ಟ್ ಕೂಡಲೇ ಅದನ್ನು ಬದಲಾಯಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಮೊದಲು ವೀರ ಬಸವಣ್ಣ ಎಂದು ಹೆಸರಿಡಲಾಗಿತ್ತು. ಇದಕ್ಕೆ ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ವೀರ ಬ್ರಾಹ್ಮಣ ಎಂದು ಹೆಸರಿಟ್ಟಿರುವುದಕ್ಕೆ ಅಧ್ಯಕ್ಷ ರಾಜಶ್ರೀ ದೇಶಮುಖ ಖಂಡಿಸಿದ್ದಾರೆ.
ಈಗಾಗಲೇ ಪೋಸ್ಟರ್‌ನಲ್ಲಿ ತೋರಿಸಿರುವ ಹಾಗೆ ದೊಡ್ಡದಾದ ಲಾಂಗು, ಮಚ್ಚು ಹಿಡಿದು ನಿಂತಿರುವ ಹಾಗೂ ಪಕ್ಕದಲ್ಲಿ ಬಂದೂಕು ತೋರಿಸಿರುವ ಚಿತ್ರಕ್ಕೆ ವೀರ ಬ್ರಾಹ್ಮಣ ಎಂದು ಹೆಸರಿಟ್ಟಿರುವುದು ಎಷ್ಟರ ಮಟ್ಟಿಗೆ ಸರಿಯಾಗಿದೆ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement