371(ಜೆ) ಉಪ ಸಮಿತಿ ವರದಿ ನಿಯಮ ಮಾರ್ಪಾಡಿಗೆ ಒತ್ತಾಯ
ಕ.ಪ್ರ.ವಾರ್ತೆ ಗುಲ್ಬರ್ಗ ಜು.21
371(ಜೆ)ನೇ ವಿಧಿಯ ಸಚಿವ ಸಂಪುಟ ಉಪ ಸಮಿತಿ ವರದಿಯಲ್ಲಿ ರೂಪಿಸಿದ ಕೆಲವು ನಿಯಮಾವಳಿಗಳನ್ನು ಮಾರ್ಪಾಡು ಮಾಡಿ ಕೂಡಲೇ ಸಚಿವ ಸಂಪುಟದಲ್ಲಿ ನಿಯಾಮವಳಿ ಅಂಗೀಕರಿಸಬೇಕೆಂದು ಹೈ.ಕ. ಹೋರಾಟ ಸಮಿತಿ ನಗರದ ಘಟಕ ಭಾನುವಾರ ನಡೆಸಿದ ಸಭೆಯಲ್ಲಿ ಒತ್ತಾಯಿಸಲಾಯಿತು.
ಹೈ.ಕ. ಅಭಿವೃದ್ಧಿ ಮಂಡಳಿ ರಚನೆಗೆ ಸ್ವಾಗತಿಸಿರುವ ಸಭೆ 371(ಜೆ)ನೇ ವಿಧಿಯ ಅಡಿಯಲ್ಲಿ ಈ ಭಾಗಕ್ಕೆ ಶಿಕ್ಷಣದಲ್ಲಿ ಶೇ.70ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಆದರೆ, ರಾಜ್ಯ ಮಟ್ಟದಲ್ಲಿ ಯಾವುದೇ ಮೀಸಲಾತಿ ಕಲ್ಪಿಸಿಲ್ಲ. ಹೀಗಾಗಿ ಕೂಡಲೇ ರಾಜ್ಯ ಮಟ್ಟದಲ್ಲಿ ಶೇ.20ರಷ್ಟು ಮೀಸಲಾತಿ ಕಲ್ಪಿಸಬೇಕು ಮತ್ತು ಉದ್ಯೋಗದಲ್ಲಿ ಎ, ಬಿ, ಸಿ ಮತ್ತು ಡಿ ಹುದ್ದೆಗಳಲ್ಲಿ ಶೇ. 80ರಷ್ಟು ಮೀಸಲಾತಿ ಮತ್ತು ರಾಜ್ಯ ಮಟ್ಟದಲ್ಲಿ ಶೇ. 20ರಷ್ಟು ಮೀಸಲಾತಿ ನೀಡಬೇಕು ಎಂದು ಸಭೆಯಲ್ಲಿ ನಿರ ಯಿಸಲಾಯಿತು. ಹೈ.ಕ. ಹೋರಾಟ ಸಮಿತಿಯ ರೂವಾರಿ ಹಾಗೂ ಮಾಜಿ ಸಚಿವ ವೈಜನಾಥ ಪಾಟೀಲ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಹೈ.ಕ. ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಮುಖಂಡರಾದ ಸುರೇಶ ಸಜ್ಜನ್, ವೆಂಕಟರೆಡ್ಡಿ ಮುದ್ನಾಳ, ಚಂದ್ರಶೇಖರ ಹರಸೂರ, ಬಸವಾರಜ ಕುಮ್ನೂರ್, ಸಂಗೀತ ಕಟ್ಟಿಮನಿ, ಡಿ.ವಿ. ಪಾಟೀಲ್, ಸಿದ್ರಾಮಯ್ಯ ಸ್ವಾಮಿ ವಾರದ್ ಉಪಸ್ಥಿತರಿದ್ದರು.