ನುಡಿದಂತೆ ನಡೆ ಕಾಂಗ್ರೆಸ್ ಸಿದ್ಧಾಂತ: ಮಾಲಕರೆಡ್ಡಿ
ಯಾದಗಿರಿ: ನೂರಾರು ವರ್ಷಗಳ ಇತಿಹಾಸವುಳ್ಳ ಕಾಂಗ್ರೆಸ್‌ನಲ್ಲಿ ಅಂದಿನಿಂದ ಇಂದಿನವರೆಗೂ ಸಾಮಾನ್ಯ ಜನತೆಗೆ ಸಹಕಾರಿಯಾಗುವ ಜನಪರ ಕಾಳಜಿಯುಳ್ಳ ಕಾರ್ಯವನ್ನು ಮಾಡುತ್ತ ನುಡಿದಂತೆ ನಡೆಯುವ ಸಿದ್ಧಾಂತವನ್ನು ಪಾಲಿಸಿಕೊಂಡು ಬರುತ್ತಿದೆ ಎಂದು ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ಹೇಳಿದರು. ತಾಲೂಕಿನ ವಡಗೇರಾದಲ್ಲಿ ಶನಿವಾರ 1ಕ್ಕೆ ಕೆಜಿ ಅಕ್ಕಿ ನೀಡುವ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹೇಳಿದಂತೆ ನಡೆದುಕೊಳ್ಳುತ್ತಿದೆ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳಲ್ಲಿ ಒಂದಾದ ಕೆಜಿಗೆ 1ರಂತೆ ಅಕ್ಕಿ ನೀಡುವ ಯೋಜನೆ ಜಾರಿಗೆ ತರಲಾಗಿದೆ. ಹಂತ ಹಂತವಾಗಿ ಹೇಳಿದ ಎಲ್ಲ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದರು.
ಅಭಿನಂದನೆ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ತಂದಲ್ಲಿ ರಾಜ್ಯ ಅಭಿವೃದ್ಧಿಪಥದತ್ತ ಸಾಗುವುದರಲ್ಲಿ ಸಂದೇಹವಿಲ್ಲ. ಆ ನಿಟ್ಟನಲ್ಲಿ ಕಾಂಗ್ರೆಸ್ ಉತ್ತಮ ಆಡಳಿತ ನೀಡುತ್ತದೆ ಎಂದು ಭರವಸೆ ನೀಡಿದರು.