ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಡಿತರ ಚೀಟಿ ನೋಂದಣಿ: ಹಣ ಲೂಟಿಯ ಆರೋಪ

Lingaraj Badiger
Updated On : 22 Jul 2013, 10:54 am

ಸೇಡಂ: ಪಟ್ಟಣ ಹಾಗೂ ತಾಲೂಕಿನ ಹಲವು ಗ್ರಾಮಗಳಲ್ಲಿ ಪಡಿತರ ಚೀಟಿ ನೋಂದಣಿ ಹೆಸರಲ್ಲಿ ತಾಪಂ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಣ ಲೂಟಿ ಮಾಡುತ್ತಿದ್ದಾರೆಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ರಂಖಾನ್ ಆರೋಪಿಸಿದ್ದಾರೆ.
ನಿಯಮಗಳನ್ನು ಉಲ್ಲಂಘಿಸಿ, ಅಧಿಕಾರಿಗಳು ಹಾಗೂ ಫ್ರಾಂಚೈಸ್ಸಿದಾರರು ಪಡಿತರ ಚೀಟಿ ನೋಂದಣಿಗಾಗಿ ಒಂದೊಂದು ಕುಟುಂಬಕ್ಕೆ 300ಕ್ಕೂ ಹೆಚ್ಚು ಹಣ ವಸೂಲಿ ಮಾಡುತ್ತಿದ್ದಾರೆ. ಇದರಿಂದ ಬಡ ಜನತೆಗೆ ತೊಂದರೆಯಾಗುತ್ತಿದೆ.
ತಾಲೂಕಿನ, ಮುಧೋಳ, ಆಡಕಿ, ಮದನಾ, ರಂಜೋಳ, ಇಟಕಾಲ್, ಮೋತಕಪಲ್ಲಿ ಮೇದಕ ವಿಧಾನಸಭಾ ಕ್ಷೇತ್ರದ ಶಿರೊಳ್ಳಿ, ರುದ್ನೂರ್, ರಾಯಕೋಡ, ಸುಲೇಪೇಟ್ ಮುಂತಾದ ಗ್ರಾಮ ಪಂಚಾಯತಗಳಲ್ಲಿ ಬಡ ಜನರಿಂದ ನಿಗದಿತ 50 ರುಪಾಯಿಗಿಂತ ಹೆಚ್ಚು ಪಡೆದು ಪೀಡಿಸಲಾಗುತ್ತಿದೆ.
ಪಟ್ಟಣಕ್ಕೆ ಸಮೀಪವಿರುವ ರುದ್ನೂರ, ರಾಯಕೋಡ, ಶಿರೊಳ್ಳಿಯ ಗ್ರಾಮಸ್ಥರು ಪಡಿತರ ಚೀಟಿ ಫೋಟೋ ನೋಂದಣಿಗಾಗಿ ದೂರದ ಚಿಂಚೋಳಿಗೆ ಹೋಗಬೇಕಾದ ಅನಿವಾರ್ಯತೆ ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement