ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪಡಿತರ ಚೀಟಿಗಾಗಿ ತೆರಿಗೆ ಕಡ್ಡಾಯ; ವಿರೋಧ

Lingaraj Badiger
Updated On : 22 Jul 2013, 10:54 am

ಗುಲ್ಬರ್ಗ/ಶಹಾಬಾದ್: ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ತೆರಿಗೆ ಪಾವತಿ ಕಡ್ಡಾಯವಾಗಿದೆ ಎಂದು ನಾಲವಾರ ಗ್ರಾಮದಲ್ಲಿ ಡಂಗೂರ ಸಾರಿದ ಗ್ರಾಮ ಪಂಚಾಯತಿ ಅಧಿಕಾರಿಗಳ ಕ್ರಮವನ್ನು ನಾಲವಾರ ಗ್ರಾಮ ಜೈ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸಿ, ಗ್ರಾಪಂ ಅಧಿಕಾರಿಗಳು ತೆರಿಗೆ ಪಾವತಿಗಾಗಿ ಇರುವ ಎಲ್ಲ ನಿಯಮಗಳನ್ನು ಗಾಳಿಗೆ ತೂರಿದ್ದಾರೆಂದು ದೂರಿದರು.
ಗ್ರಾಪಂ ಕಚೇರಿಯಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಲು ಬಂದ ಜನರಿಗೆ ತೆರಿಗೆ ಪಾವತಿ ರಸೀದಿಯಲ್ಲಿ ಕಂಪ್ಯೂಟರ್ ಆಪರೇಟರ್ ಕೇಳಿದ್ದರಿಂದ ಜನರಲ್ಲಿ ಗೊಂದಲ ಉಂಟಾಯಿತು. ವಿಷಯ ತಿಳಿದ ಜೈಕರವೇ ವಲಯ ಅಧ್ಯಕ್ಷ ಶಿವುಕುಮಾರ ಸುಣಗಾರ ಹಾಗೂ ಕಾರ್ಯಕರ್ತರು ಸ್ಥಳಕ್ಕೆ ಬಂದು ಗ್ರಾಪಂ ಅಧಿಕಾರಿಗಳ ಕ್ರಮವನ್ನು ವಿರೋಧಿಸಿ, ರಾಜ್ಯದಲ್ಲಿ ಎಲ್ಲೂ ಇಲ್ಲದ ನಿಯಮ ನಾಲವಾರದಲ್ಲಿ ಏಕೆ ಎಂದು ಪ್ರಶ್ನಿಸಿದರು.
ಕರ ವಸೂಲಿ ಶೂನ್ಯ ಹಿನ್ನೆಲೆ ಆದೇಶ: ಪಂಚಾಯಿತಿ ಅಧಿಕಾರಿಗಳು ನಮಗೆ ಮೇಲಿಂದ ಆದೇಶ ಬಂದಿದೆ ಎಂದು ಹೇಳಿದ್ದರಿಂದ ಕಾರ್ಯಕರ್ತರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಫೋನ್ ಮೂಲಕ ಸಂಪರ್ಕಿಸಿ ಮಾತನಾಡಿದಾಗ, ಜಿಪಂ ಅಧಿಕಾರಿಗಳು ಗ್ರಾಮದಲ್ಲಿ ಕರ ವಸೂಲಿ ಶೂನ್ಯವಾಗಿರುವುದರಿಂದ ಈ ಮಾರ್ಗ ಅನುಸರಿಸಲು ಆದೇಶಿಸಿದ್ದಾರೆಂದು ತಿಳಿಸಿದರು.
ಇದಕ್ಕೆ ವಿರೋಧ ವ್ಯಕ್ತಪಡಿಸಿದ ಜೈಕರವೇ ಕಾರ್ಯಕರ್ತರು ಸಾರ್ವಜನಿಕರಿಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಕೋಲಿ ಸಮಾಜದ ಜಿಲ್ಲಾ ಕಾರ್ಯದರ್ಶಿ ಸಾಬಣ್ಣ ಜಾಲಗಾರ, ಮಲ್ಲಣ್ಣ ಪೂಜಾರಿ, ಬನಶಂಕರ ಬಾವನಗಿರಿ, ತೋಟಪ್ಪ ಸುಣಗಾರ ಸೇರಿದಂತೆ ಕಾರ್ಯಕರ್ತರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement