ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪರಿಸರಕ್ಕೆ ಪೂರಕ ಗಿಡಗಳನ್ನು ಬೆಳೆಸಿ

Lingaraj Badiger
Updated On : 22 Jul 2013, 11:00 am

ಕನ್ನಡಪ್ರಭ ವಾರ್ತೆ  ಶಹಾಪುರ  ಜು.21
ಪರಿಸರಕ್ಕೆ ಪೂರಕವಾಗಿ ಹೆಚ್ಚು ಗಿಡಗಳನ್ನ ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕಾಗಿದ್ದು ಪ್ರಸ್ತುತವಾಗಿ ಅಗತ್ಯವಾದ ಕರ್ತವ್ಯವಾಗಿದೆ ಎಂದು ಹಿರಿಯ ನ್ಯಾಯವಾದಿ ಭಾಸ್ಕರ ರಾವ್ ಮುಡೂಬೂಳ ಹೇಳಿದರು.
  ಅರಣ್ಯ ಇಲಾಖೆ, ವ್ಯವಸಾಯ ಸೇವಾ ಸಹಕಾರ ಸಂಘ, ಗ್ರಾಪಂ ಖಾನಾಪುರ, ನಿಸರ್ಗ ವಿವಿಧೋದ್ದೇಶ ಸೇವಾ ಸಂಸ್ಥೆ ಇವುಗಳ ಆಶ್ರದಲ್ಲಿ ಖಾನಾಪುರದಲ್ಲಿ ಹಮ್ಮಿಕೊಂಡಿದ್ದ ಹಸಿರೀಕರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಕೆಂಡದಂತಹ ಬಿಸಿಲಿನಲ್ಲಿ ಕಾಲ ಕಳೆಯುವ ಸ್ಥಿತಿ ನಿರ್ಮಾಣವಾಗಿದೆ. ಮನುಷ್ಯ ಒಂದು ಇಂಚು ಜಾಗ ಬಿಡದಂತೆ ಮನೆ ಕಟ್ಟಿಕೊಂಡಿದ್ದಾನೆ. ಇದ್ದ ಮರಗಳನ್ನು ಕಡಿದು ಹಾಕುತ್ತಿದ್ದಾನೆ. ಬಹುತೇಕ ಮನೆಗಳ ಮುಂದೆ ಗಿಡ ಬಳ್ಳಿಗಳು ಕಾಣಿಸುತ್ತಿಲ್ಲ. ಮನುಷ್ಯ ಪರಿಸರಕ್ಕೆ ಅಪಚಾರ ಮಾಡುತ್ತಿದ್ದಾನೆ. ಅರಣ್ಯ ಪ್ರದೇಶದ ಸುಲಿಗೆ ಮಾಡುತ್ತಿದ್ದಾನೆ. ಪರಿಸರವು ಸಹ ತನ್ನ ಸಮತೋಲನ ಕಾಪಾಡಿಕೊಳ್ಳಲು ನಮ್ಮ ವಿರುದ್ಧ ಸಮರ ಸಾರಿದ್ದು, ಪರಿಸರ ರಕ್ಷಣೆಯತ್ತ ಎಲ್ಲರ ಕಾಳಜಿ ಅಗತ್ಯ ಎಂದರು.  
ಒಳ್ಳೆ ಪರಿಸರ: ಉಪ ಅರಣ್ಯ ಸಂರಕ್ಷಣಾಧಿಕಾರಿ ಆರ್. ರಾಜಣ್ಣ, ಹಸಿರೀಕರಣ ಸೃಷ್ಟಿಸುವುದರಿಂದ ವಾತಾವರಣದಲ್ಲಿ 6 ಡಿಗ್ರಿ ಉಷ್ಣಾಂಶ ಕಡಿಮೆ ಮಾಡಬಹುದು. ಉತ್ತಮ ಆರೋಗ್ಯ, ಒಳ್ಳೆ ಪರಿಸರದಲ್ಲಿ ಸದೃಢರಾಗಿ ಜೀವಿಸಬಹುದು. ಹೆಚ್ಚಿನ ಶಾಲೆಗಳಿಗೆ  ಕಂಪೌಂಡ್ ಇಲ್ಲ. ಕನಿಷ್ಟ ಕಾಂಪೌಂಡ್ ನಿರ್ಮಾಣ ಮಾಡಿ, ಅಲ್ಲಿ ಸಸಿಗಳನ್ನು ಬೆಳೆಸಬಹುದು. ಅವುಗಳಿಗೆ ಔಷಧಿ ಗಿಡಮೂಲಿಕೆಗಳು ಇಲ್ಲಿ ಬೆಳೆಸಬಹುದು. ಗಿಡಗಳನ್ನು ಬೆಳೆಸದಿದ್ದರೆ ನಮಗೆ ಉಸಿರಾಟ ಸೇರಿದಂತೆ ನಾನಾ ಕಾಯಿಲೆಗಳು ಬರುತ್ತವೆ. ಅದರಿಂದ ತಪ್ಪಿಸಿಕೊಳ್ಳಲು ಗಿಡ ಬೆಳೆಸುವುದೊಂದೇ ಪರಿಹಾರ ಎಂದು ತಿಳಿಸಿದರು.
  ಕಾರ್ಯನಿರ್ವಹಣಾಧಿಕಾರಿ ನರಸಿಂಹರಾವ್ ಮುತಾಲಿಕ್, ಸುರಪುರ ವಲಯ ಅರಣ್ಯಧಿಕಾರಿ ಬಸವರಾಜ ಡಾಂಗೆ ಮಾತನಾಡಿದರು. ಗ್ರಾಪಂ ಅಧ್ಯಕ್ಷ ರಾಜಕುಮಾರ ಹೊಸ್ಮನಿ, ಅರಣ್ಯ ದೌಲತ್ ಹುಸೇನ್, ಮಹ್ಮದ ಹಸನ್, ಯಂಕಮ್ಮ ಚಂದ್ರಶೇಖರ, ಕೃಷ್ಣ ಸುಬೇದಾರ, ನಿಸರ್ಗ ವಿವಿಧೋದ್ದೇಶ ಸೇವಾ ಸಂಸ್ಥೆಯ ಮಲ್ಲಯ್ಯ ಪೋಲಂಪಲ್ಲಿ, ರಂಗಪ್ಪ ಆಲೂರ ಇದ್ದರು. ಎ.ವೈ. ಪದ್ಮಾಕರ ನಿರೂಪಿಸಿದರು. ಮೊನಪ್ಪ ಅನವಾರ ಸ್ವಾಗತಿಸಿ, ನಿಂಗಪ್ಪ ವಂದಿಸಿದರು.
--
ಸಿಡಿಲು ಬಡಿದು ಸಾವು: ಪರಿಹಾರ ಧನ ವಿತರಣೆ
ಯಾದಗಿರಿ: ಇತ್ತೀಚಿಗೆ ಸಿಡಿಲು ಬಡಿದು ಮೃತಪಟ್ಟ ನರಸಪ್ಪ ಕತಲಪ್ಪ ಗೊಲ್ಲರ ಕುಟುಂಬ ಸದಸ್ಯರಿಗೆ ಶಾಸಕ ಡಾ.ಎ.ಬಿ. ಮಾಲಕರೆಡ್ಡಿ ಅವರು ಪರಿಹಾರ ಧನದ ಚೆಕ್ ವಿತರಣೆ ಮಾಡಿದರು.  ನಂತರ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಪ್ರಕೃತಿ ವಿಕೋಪದಲ್ಲಿ ಮಡಿದವರಿಗೆ ಒಂದು ಲಕ್ಷ ರು. ಪರಿಹಾರ ನೀಡುತ್ತಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಅದನ್ನು 1.50 ಲಕ್ಷ ರು.ಗೆ ಏರಿಸಿದೆ. ನೊಂದ ಕುಟುಂಬಕ್ಕೆ ನೆರವಿನ ಸಹಾಯ ಹಸ್ತ ಚಾಚುವುದು ಸರ್ಕಾರದ ಪ್ರಥಮ ಉದ್ದೇಶವಾಗಿದೆ ಎಂದು ಹೇಳಿದರು. ತಹಸೀಲ್ದಾರ ಕೆ.ಎಲ್. ಭಜಂತ್ರಿ, ಬಸವರಾಜಪ್ಪ, ಹನುಮೇಗೌಡ, ಶರಣಬಸವ ಕುರುಕುಂದಿ, ರಾಹುಲ ಅರಿಕೇರಿ, ಶರಣಪ್ಪ ಕ್ಯಾತನಾಳ, ಗುರಣ್ಣಗೌಡ, ಶರಣಬಸಪ್ಪ, ನಾಗಪ್ಪ, ಶ್ಯಾಮ ಸುಂದರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement