ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪ್ರತ್ಯೇಕ ಅಪಘಾತ; ಇಬ್ಬರ ಸಾವು

Lingaraj Badiger
Updated On : 22 Jul 2013, 10:55 am

ಗುಲ್ಬರ್ಗ: ಜಿಲ್ಲೆಯಲ್ಲಿ ಪ್ರತ್ಯೇಕ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.
ನಗರದ ಕಾಕಡೆಚೌಕ್- ಹುಮನಾಬಾದ್ ವರ್ತುಲ್ ರಸ್ತೆಯಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಭವಾನಿ ನಗರದ ಶರಣು ಅಲಿಯಾಸ ಶಿವಶರಣಪ್ಪ (45) ಎಂಬಾತ ಮೃತಪಟ್ಟಿದ್ದಾನೆ.
ಶನಿವಾರ ರಾತ್ರಿ 9ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಗಾಯಗೊಂಡ ಶಿವಶರಣಪ್ಪನಿಗೆ ಚಿಕಿತ್ಸೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಆತ ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಸಾವು: ಸೇಡಂ ಪೊಲೀಸ್ ಠಾಣೆ ವ್ಯಾಪ್ತಿಯ ಬಟಗೇರಾ(ಬಿ) ಕ್ರಾಸ್ ಹತ್ತಿರ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬಳು ಮೃತಪಟ್ಟಿದ್ದಾಳೆ. ತಂದೆ ಹಣಮಂತ ರಂಗವಾರ ಎಂಬಾತ ತನ್ನ ಚಿಕ್ಕಮ್ಮ ನೀಲಮ್ಮ ರಂಗವಾರ ಅವರನ್ನು ಬೈಕ್ ಮೇಲೆ ಕೂಡಿಸಿಕೊಂಡು ಹೋಗುತ್ತಿದಾಗ ಬಟಗೇರಾ ಕ್ರಾಸ್ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ನೀಲಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಕೃಷ್ಣ ರಂಗವಾರ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

26ರಿಂದ ವಲಯ ಮಟ್ಟದ ಕ್ರೀಡಾಕೂಟ
ಚಿತ್ತಾಪುರ: ತಾಲೂಕಿನ ವಲಯ ಮಟ್ಟದ ಕ್ರೀಡಾಕೂಟಗಳು ಜು.26ರಿಂದ ಆರಂಭಗೊಳ್ಳಲಿವೆ ಎಂದು ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ದೇವಿಂದ್ರರಡ್ಡಿ ದೂಗನೂರ್ ಹಾಗೂ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಲಕ್ಷ್ಮಣ ಲೋಡನೋರ ತಿಳಿಸಿದ್ದಾರೆ.
ಪ್ರಾಥಮಿಕ ಶಾಲೆ ಕ್ರೀಡಾಕೂಟಗಳು ಶಹಾಬಾದ್ ನಗರ ವಲಯ ಜು.26 ಹಾಗೂ 27ರಂದು, ಶಹಾಬಾದ್ ಗ್ರಾಮೀಣ ವಲಯ 29 ಹಾಗೂ 30ರಂದು ಬಿವಿಎಂ ಮೈದಾನದಲ್ಲಿ ಜರುಗಲಿವೆ. ನಾಲವಾರ ವಲಯ ಜು.29 ಹಾಗೂ 30ರಂದು ವಾಡಿ ಸೇಂಟ್ ಅಂಬ್ರಸ್ ಮೈದಾನದಲ್ಲಿ, ಕಾಳಗಿ ವಲಯ ಜು.27 ಹಾಗೂ 28ರಂದು ಗಾಜರೆ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement