ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಹೊರ ಹರಿವಿನ ನಿಯಂತ್ರಣ

Lingaraj Badiger
Updated On : 22 Jul 2013, 10:59 am

ಹುಣಸಗಿ: ನಾರಾಯಣಪುರ ಜಲಾಶಯದ 19 ಗೇಟುಗಳನ್ನು ಒಂದು ಮೀಟರ್‌ನಷ್ಟು ಎತ್ತರಿಸಿ 1.30 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತದೆ. ಜಲಾಶಯಕ್ಕೆ ಒಳ ಹಾಗೂ ಹೊರ ಹರಿವನ್ನು ಸಮನಾಗಿ ನಿಯಂತ್ರಿಸಲಾಗುತ್ತಿದೆ.
  ಜಲಾಶಯದ ಕೆಳ ಭಾಗದಲ್ಲಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಾತ್ರದ ಗ್ರಾಮಗಳಲ್ಲಿ ಜನರಿಗೆ ಸೂಕ್ತ ತಿಳಿವಳಿಕೆಯನ್ನು ಕಂದಾಯ ಇಲಾಖೆ ಸಿಬ್ಬಂದಿ ಮುಖಾಂತರ ಜಿಲ್ಲಾಡಳಿತ, ಕೆಬಿಜೆಎನ್ನೆಲ್ ಈಗಾಗಲೇ ನೀಡಿದೆ.
ಇನ್ನೂ ಹೆಚ್ಚು ನೀರು ಬರುವ ಸಾಧ್ಯತೆ: 2009ರಲ್ಲಿ ಎಡದಂಡೆ, ಬಲದಂಡೆ ಸೇರಿದಂತೆ ಜಲಾಶಯದ 43 ಗೇಟ್‌ಗಳಲ್ಲಿ 39 ಗೇಟ್‌ಗಳನ್ನು ತೆರೆದು 5 ಲಕ್ಷ ಕ್ಯುಸೆಕ್ ನೀರನ್ನು ಹರಿಬಿಡಲಾಗಿತ್ತು. ಸದ್ಯ ಭಾನುವಾರ ಕೂಡ ಮಹಾರಾಷ್ಟ್ರದ ಮುಂಬೈ, ಸಾತಾರ, ಸಾಂಗಲಿ ವಿವಿಧೆಡೆ ಮಳೆಯಾಗುತ್ತಿದೆ. ಆದ್ದರಿಂದ ಇನ್ನೂ ಹೆಚ್ಚಿನ ನೀರು ಬರುವ ಸಾಧ್ಯತೆಯೂ ಇದೆ.
ನೀರುಪಾಲು: ನದಿ ದಡದ ಗ್ರಾಮಗಳ ರೈತರ ಇನ್ನೊಂದು ಉಪಕಸುಬು ಮೀನು ಹಿಡಿಯುವುದು. ಹೀಗೆ ಕೃಷ್ಣಾ, ಡೋಣಿ ನದಿ ಸಂಗಮದಲ್ಲಿ ಮೀನು ಹಿಡಿಯಲು ಹೋದ ಸೋಮಲಪ್ಪ ಜುಮಾಲಪುರ ಶನಿವಾರ ಮೀನು ಬಲೆ ಬಿಡಿಸಲು ಹೋದಾಗ ನೀರಿನ ರಭಸಕ್ಕೆ ಸಿಕ್ಕು ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement