ಕೃಷ್ಣೆಗೆ ಶಾಸಕ ವೆಂಕಟಪ್ಪ ಬಾಗಿನ
ಕನ್ನಡಪ್ರಭ ವಾರ್ತೆ ಹುಣಸಗಿ ಜು.23
ಕೃಷ್ಣಾ ನದಿಗೆ ನೀರು ಬಂದು ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರು ಮಂಗಳವಾರ ಕೃಷ್ಣೆಗೆ ಬಾಗಿನ ಅರ್ಪಿಸಿದರು.
ನಂತರ ಮಾತನಾಡಿದ ಅವರು, ಕೃಷ್ಣೆ ಈ ಭಾಗದ ಅಧಿದೇವತೆ. ರೈತರ ಜೀವನಾಡಿಯಾಗಿದೆ. ರೈತರೆಲ್ಲರೂ ಕೃಷ್ಣೆಯನ್ನು ಪೂಜಿಸುವುದರೊಂದಿಗೆ ತಮ್ಮ ಹೊಲಗಳಿಗೆ ಬರಮಾಡಿಕೊಳ್ಳಬೇಕೆಂದು ಹೇಳಿದರು.
ಈ ಬಾರಿ ಜಲಾಶಯ ಜುಲೈ ತಿಂಗಳಿನಲ್ಲಿಯೇ ಭರ್ತಿಯಾಗಿರುವುರಿಂದ ರೈತರೆಲ್ಲ ಸಂತಸದಿಂದ ಇದ್ದಾರೆ. ನಮ್ಮ ಮನೆಯಲ್ಲಿ ದೇವರನ್ನು ಪೂಜಿಸುವಂತೆ ಕೃಷ್ಣೆಯನ್ನು ಪೂಜಿಸಬೇಕು. ಈ ಬಾರಿ ರೈತರಿಗೆ ಎರಡು ಬೆಳೆ ಬೆಳೆಯಲು ವರುಣ ಕೃಪೆ ತೋರಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. ಈ ಬಾರಿ ರೈತರಿಗೆ ಫಸಲು ಹುಲುಸಾಗಿ ಬರಲಿ ಹಾಗೂ ಉತ್ತಮ ಬೆಲೆ ಸಿಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಜಶೇಖರಗೌಡ ವಜ್ಜಲ್, ಕಿಶನರಾವ ಕುಲಕರ್ಣಿ, ಸೂಲಪ್ಪ ಕಮತಗಿ, ಶಿವಣ್ಣ ಮಂಗಿಹಾಳ, ವಿಠಲ ಯಾದವ, ವೆಂಕೋಬ ಯಾದವ, ಪ್ರಭುಗೌಡ ರಾಜನಕೋಳುರ, ಮಲ್ಲನಗೌಡ ಮಾಗನೂರ, ನಾನಾಗೌಡ ಪಾಟೀಲ ಹುಣಸಗಿ, ಸಿದ್ದಣ್ಣ ಮಲಗಲದಿನ್ನಿ, ಸುರೇಶ ನೀರಲಗಿ, ಆರ್.ಎಂ. ರೇವಡಿ, ಗುಂಡಪ್ಪ ಸೊಲ್ಲಾಪುರ, ಮುದಿಗೌಡ ಕುಪ್ಪಿ, ದತ್ತು ಗುತ್ತೇದಾರ, ನಾಗರಾಜ ಜೋಗುರ, ಅರುಣ ಕುಂಬಾರ, ಶಂಕರ ಚವ್ಹಾಣ, ಸುರೇಶ ತಂಬಾಕೆ ಇತರರು ಇದ್ದರು. ಕೆಬಿಜೆಎನ್ನೆಲ್ ಸಿಇ ಸುದರ್ಶನ, ಎಸ್‌ಇ ಭೋಜಾನಾಯಕ ಕಟ್ಟಿಮನಿ ಇದ್ದರು.