ತಲೆಮರೆಸಿಕೊಂಡಿದ್ದ ಇಬ್ಬರ ಬಂಧನ
ಗುಲ್ಬರ್ಗ: ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ 4 ಕೋಟಿ ಅವ್ಯವಹಾರ ನಡೆಸಿದ ಹಿನ್ನೆಲೆಯಲ್ಲಿ ಅಮಾನತುಗೊಂಡು ತಲೆಮರೆಸಿಕೊಂಡಿದ್ದ ಕಿರಿಯ ಅಭಿಯಂತರ ಅರುಣಕುಮಾರ್ ಮತ್ತು ಹಣಕಾಸು ಅಧಿಕಾರಿ ಎಸ್.ಬಿ. ಪಾಟೀಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಮತ್ತು ಜಿಪಂ ಕಾರ್ಯನಿರ್ವಾಹಕ ಅಭಿಯಂತರ ಎಂ.ಎಚ್. ಭೀಮಕ್ಕನವರ್ ಮತ್ತು ಹಿರಿಯ ಅಭಿಯಂತರ ಚಂದ್ರಶೇಖರ ನಾಸಿ ಪರಾರಿಯಾಗಿದ್ದು, ಅವರ ಪತ್ತೆಗೂ ಪೊಲೀಸರು ಜಾಲ ಬೀಸಿದ್ದಾರೆ. ಜಿಪಂ ಎಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯನಿರ್ವಾಹಕ ಅಭಿಯಂತರರಾಗಿ ಸೇವೆ ಸಲ್ಲಿಸುತ್ತಿದ್ದ ಎಂ.ಎಚ್. ಭೀಮಕ್ಕನವರ್, ಹಿರಿಯ ಅಭಿಯಂತರ ಅರುಣಕುಮಾರ್, ಹಣಕಾಸು ಅಧಿಕಾರಿ ಎಸ್.ಬಿ. ಪಾಟೀಲ್, ಕಿರಿಯ ಅಭಿಯಂತರ ಚಂದ್ರಶೇಖರ ನಾಸಿ ಅವರು ಕೋಟ್ಯಂತರ ರು. ಅವ್ಯವಹಾರ ನಡೆಸಿದ್ದರು.
--