ಮಾತಾ ಮಾಣಿಕೇಶ್ವರಿ ದರ್ಶನ
ಸೇಡಂ: ತಾಲೂಕಿನ ಸುಕ್ಷೇತ್ರ ಯಾನಾಗುಂದಿಯ ಮಾಣಿಕಗಿರಿಯಲ್ಲಿ ಗುರುಪೂರ್ಣಿಮೆ ಮತ್ತು ತಮ್ಮ 80ನೇ ಜನ್ಮ ದಿನೋತ್ಸವದಂದು ಲಕ್ಷಾಂತರ ಭಕ್ತರಿಗೆ ಮಹಾಯೋಗಿನಿ ಮಾತಾ ಮಾಣಿಕೇಶ್ವರಿ ದರ್ಶನ ನೀಡಿದರು.
ಮಾತಾಜಿಯವರ 80ನೇ ಜನ್ಮದಿನದ ಅಂಗವಾಗಿ ಮಾತೆಯ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ಅಸಂಖ್ಯಾತ ಭಕ್ತರು ಮಾಣಿಕ ಗಿರಿಯಲ್ಲಿ ಸಮಾವೇಶಗೊಂಡಿದ್ದರು. ಭಜನೆ, ವಿಶೇಷ ಪೂಜೆ ಜರುಗಿದ್ದವು. ಮಧ್ಯಾಹ್ನ 1. 30ಕ್ಕೆ ಗವಿಯಿಂದ ಹೊರಬಂದು ಮಧ್ಯಾಹ್ನ 1.55ರವರೆಗೆ ಭಕ್ತರಿಗೆ ದರ್ಶನ ನೀಡಿದರು.
ಅಮ್ಮನವರು ಗವಿಯಿಂದ ಬರುತ್ತಿರುವ ಸಂದರ್ಭದಲ್ಲಿ ಮಳೆ ಸುರಿಯುತ್ತಿದ್ದರೂ, 20 ನಿಮಿಷಗಳ ಕಾಲ ಭಕ್ತರಿಗೆ ದರ್ಶನ ನೀಡಿದ್ದು, ಭಕ್ತರ ಪಾಲಿಗೆ ಮರೆಯಲಾಗದ ಕ್ಷಣಗಳು. ಟ್ರಸ್ಟ್ ಕಾರ್ಯದರ್ಶಿ ಶಿವಯ್ಯ ಸ್ವಾಮಿ, ಶಾಸಕ ಡಾ.ಎ.ಬಿ. ಮಲಕರೆಡ್ಡಿ, ಶಂಕಣ್ಣ ವಣಿಕ್ಯಾಳ, ತಿಪ್ಪಣಪ್ಪ ಕಮಕನೂರ, ರಮೇಶ, ಸಿದ್ರಾಮಪ್ಪ ಪಾಲ್ಗೊಂಡಿದ್ದರು.