ಆಶನಾಳ ತಾಂಡಾದಲ್ಲಿ ನ್ಯಾಯಬೆಲೆ ಅಂಗಡಿ ತೆರೆಯಲು ಆಗ್ರಹ
ಯಾದಗಿರಿ: ತಾಲೂಕಿನ ಆಶನಾಳ ತಾಂಡಾದಲ್ಲಿ ಪಡಿತರ ಧಾನ್ಯ ಸರಬರಾಜು ಮಾಡಲು ಪ್ರತ್ಯೇಕ ನ್ಯಾಯಬೆಲೆ ಅಂಗಡಿ ಆರಂಭಿಸಬೇಕೆಂದು ಆಗ್ರಹಿಸಿ ಸೇವಾಲಾಲ ಕ್ಷೇಮಾಭಿವೃದ್ಧಿ ಯುವಕ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಆಶನಾಳ ಗ್ರಾಮದಲ್ಲಿ ಸುಮಾರು 350ಕ್ಕೂ ಹೆಚ್ಚು ಪಡಿತರ ಕಾರ್ಡುಗಳಿದ್ದು, ಅಲ್ಲಿಂದ ಆಶನಾಳ ತಾಂಡಾಕ್ಕೆ 3 ಕಿಮೀ ದೂರವಿದೆ. ಆದ್ದರಿಂದ ಆಶನಾಳ ತಾಂಡದ ಪಡಿತರ ಕಾರ್ಡುದಾರರಿಗೆ ಪಡಿತರ ಧಾನ್ಯ ಸರಿಯಾಗಿ ವಿತರಣೆ ಆಗುತ್ತಿಲ್ಲ. ಸಮಯಕ್ಕೆ ಸರಿಯಾಗಿ ಪಡಿತರ ಧ್ಯಾನ, ಸೀಮೆ ಎಣ್ಣೆ ವಿತರಿಸಲು ಸೂಕ್ತ ಕ್ರಮ ಕೈಗೊಂಡು ಪ್ರತೇಕ ನ್ಯಾಯಬೆಲೆ ಅಂಗಡಿ ಪ್ರಾರಂಭಿಸುವಂತೆ ಸಂಬಂಧಪಟ್ಟವರಿಗೆ ಸೂಚಿಸಬೇಕೆಂದು ಆಗ್ರಹಿಸಿದರು. ಸಂತೋಷ ಎಸ್, ನೆಹರು, ಸುರೇಶ, ಶ್ರವಣ, ರಾಜು, ಅಶೋಕ್, ದೇವು ಇದ್ದರು.
--