ಇಂದಿನಿಂದ 'ಲೋಕಾ' ಅಹವಾಲು ಸ್ವೀಕಾರ
ಗುಲ್ಬರ್ಗ: ಗುಲ್ಬರ್ಗ ವಿಭಾಗದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲೂಕುಗಳಿಗೆ ಜುಲೈ 25ರಿಂದ 30ರವರೆಗೆ ಭೇಟಿ ನೀಡಿ ಬೆಳಗಿನ 11ರಿಂದ ಮಧ್ಯಾಹ್ನ 3ಗಂಟೆಯವರೆಗೆ ಸಾರ್ವಜನಿಕರಿಂದ ಕುಂದು, ಕೊರತೆಗಳನ್ನು ಸ್ವೀಕರಿಸಿ, ಅವರ ಅಹವಾಲುಗಳನ್ನು ಆಲಿಸಲಿದ್ದಾರೆ.
ಕುಂದು ಕೊರತೆಗಳ ಮತ್ತು ದೂರಿನ ಬಗ್ಗೆ ಅರ್ಜಿಗಳನ್ನು ಸಾರ್ವಜನಿಕರು ಸ್ಥಳದಲ್ಲೇ ನೀಡಿ ಸದುಪಯೋಗ ಪಡೆಯಲು ಕೋರಲಾಗಿದೆ. ಅಲ್ಲದೆ ದೂರು ಸಲ್ಲಿಸಲು ಬೇಕಾಗುವ ಅರ್ಜಿ ನಮೂನೆ ಪ್ರಪತ್ರ ಸಂ.1 ಮತ್ತು 2ನ್ನು ಸ್ಥಳದಲ್ಲಿಯೇ ಪಡೆಯಬಹುದಾಗಿದೆ. ಅಹವಾಲು ಸ್ವೀಕರಿಸುವ ಅಧಿಕಾರಿಗಳ ಹೆಸರು ಹಾಗೂ ಹುದ್ದೆ, ಭೇಟಿ ನೀಡುವ ಸ್ಥಳ ಮತ್ತು ದಿನಾಂಕ ಹಾಗೂ ಅಹವಾಲು ಸ್ವೀಕರಿಸುವ ಸ್ಥಳ ಇಂತಿದೆ.
ವಿವರ: ಲೋಕಾಯುಕ್ತ ಪಿಐ ಶಾಂತಿನಾಥ ಬಿ.ಪಿ. ಅಫಜಲ್ಪುರ ಜು. 25ರಂದು ಅಫಜಲ್ಪುರ ಲೋಕೋಪಯೋಗಿ ಪ್ರವಾಸಿ ಮಂದಿರ ಹಾಗೂ ಜೇವರ್ಗಿ ಜು. 30ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಜೇವರ್ಗಿ. ಲೋಕಾಯುಕ್ತ ಪಿ.ಐ. ಜೇಮ್ ಲಾಯ್ ಕ್ಸೇವಿಯರ್ ಮಿನೇಜೆಸ್, ಆಳಂದದಲ್ಲಿ ಜು. 29ರಂದು ಲೋಕೋಪಯೋಗಿ ಪ್ರವಾಸಿ ಮಂದಿರ, ಆಳಂದ ಹಾಗೂ ಚಿಂಚೋಳಿ ಜು. 27ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಚಿಂಚೋಳಿ.
ಲೋಕಾಯುಕ್ತ ಡಿಎಸ್ಪಿ., ರವಿಕುಮಾರ್ ಎನ್. ಪಾಟೀಲ್, ಸೇಡಂನಲ್ಲಿ ಜು. 26ರಂದು ಲೋಕೋಪಯೋಗಿ ಪ್ರವಾಸಿ ಮಂದಿರ, ಸೇಡಂ ಹಾಗೂ ಚಿತ್ತಾಪುರಗಳಲ್ಲಿ ಜು. 29ರಂದು ಲೋಕೋಪಯೋಗಿ ಪ್ರವಾಸಿ ಮಂದಿರ ಚಿತ್ತಾಪುರ. ಹೆಚ್ಚಿನ ವಿವರಗಳಿಗಾಗಿ ಸಾರ್ವಜನಿಕರು ಲೋಕಾಯುಕ್ತ ಆರಕ್ಷಕ ಅಧೀಕ್ಷಕರ ಕಚೇರಿ, ಐವಾನ್-ಇ-ಶಾಹಿ ಕಾಂಪೌಂಡ್ ಗುಲ್ಬರ್ಗ. ದೂ. 08472-263645, 263684 ಸಂಪರ್ಕಿಸಬಹುದು.