ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೃಷಿ ಇಲಾಖೆಗೆ ಭೀಮಣ್ಣ ಹೋಳ್ಕರ್ ಆಯ್ಕೆ

Lingaraj Badiger
Updated On : 25 Jul 2013, 11:25 am

ಆಳಂದ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ತಾಲೂಕು ಸಂಘದ ಪದಾಧಿಕಾರಿ ನೇಮಕದ ಸಲುವಾಗಿ ಸಂಬಂಧಿಸಿದಂತೆ ಸೋಮವಾರ ಕೃಷಿ ಮತ್ತು ಶಿಕ್ಷಣ ಇಲಾಖೆ ಸಿಬ್ಬಂದಿ ಆಯ್ಕೆಗಾಗಿ ಕೈಗೊಳ್ಳಲಾದ ಚುನಾವಣೆಯಲ್ಲಿ ಬಿರುಸಿನ ಮತದಾನ ನಡೆಯಿತು.
ಶಿಕ್ಷಣ ಇಲಾಖೆಯ ಅರ್ಜುನ ಹತ್ತಿ 623, ಬಸವರಾಜ ಹತ್ತರಕಿ 596, ಅಂಬಾರಾಯ ಕರಾರಿ 558 ಮತ್ತು ಚಂದ್ರಶೇಖರ ಪೂಜಾರಿ 554 ಮತಗಳನ್ನು ಪಡೆದು ನಿರೀಕ್ಷಿತ ಗೆಲವು ಸಾಧಿಸಿದ್ದಾರೆ. ಅಲ್ಲದೆ, ಸ್ಪರ್ಧಿಸಿದ ರಮಾಬಾಯಿ 207, ರಮೇಶ ಸಕ್ಕರಗಿ 333, ರೇವಣಸಿದ್ಧಪ್ಪ 277, ಶಿವಾನಂದಪ್ಪ 388, ಸಿದ್ಧಣ್ಣ 58 ಮತಗಳ ಪಡೆದು ಸೋಲನಪ್ಪಿದ್ದಾರೆ ಎಂದು ಚುನಾವಣೆ ಸಹಾಯಕ ಅಧಿಕಾರಿಗಳು ವಿವರಿಸಿದ್ದಾರೆ.  ತಾಲೂಕು ಸಂಘದ 34 ಸ್ಥಾನಗಳಿಗೆ ಪೈಕಿ ವಿವಿಧ ಇಲಾಖೆಗಳಿಂದ 29 ಅಭ್ಯರ್ಥಿಗಳು ಈ ಮೊದಲೇ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಸೋಮವಾರ ಪ್ರಾಥಮಿಕ ಶಿಕ್ಷಣ ಕ್ಷೇತ್ರದ 4 ಸ್ಥಾನ ಹಾಗೂ ಕೃಷಿ ಇಲಾಖೆ 1 ಸೇರಿ 5 ಸ್ಥಾನಗಳಿಗೆ ಬಿರುಸಿನ ಮತದಾನ ನಡೆಯಿತು. ಅತಿ ಹೆಚ್ಚು ಮತದಾರರಿರುವ ಪ್ರಾಥಮಿಕ ವಿಭಾಗದಿಂದ 1312 ಮಂದಿ ಮತದಾರರ ಪೈಕಿ 1015 ಮಂದಿ ಮತದಾನ ಕೈಗೊಂಡರು. 25 ಮತಗಳ ಹೊಂದಿದ್ದ ಕೃಷಿ ಇಲಾಖೆ 1 ಸ್ಥಾನಕ್ಕೆ ಷಣ್ಮಖಯ್ಯ ಮಠಪತಿ ಮತ್ತು ಭೀಮಣ್ಣ ಹೋಳ್ಕರ್ ನಡುವಿನ ಪೈಪೋಟಿಯಲ್ಲಿ ಭೀಮಣ್ಣ ಹೋಳ್ಕರ್ ಅವರು 17 ಮತ ಪಡೆದು ಗೆಲವು ಸಾಧಿಸಿದರೆ, ಪ್ರತಿಷ್ಪರ್ಧಿ ಷಣ್ಮುಖಯ್ಯ ಸ್ವಾಮಿ ಕೇವಲ ಐದು ಮತ ಪಡೆದು ಸೋಲುಂಡಿದ್ದಾರೆ.
ರಾತ್ರಿ 10 ಗಂಟೆವರೆಗೆ ಮತಗಳ ಎಣಿಕೆ ಕಾರ್ಯ ನಡೆಯಿತು. ಮತಗಟ್ಟೆ ವೇಳೆ ಮತ್ತು ಎಣಿಕೆಯ ಸಂದರ್ಭದಲ್ಲಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಪರಿಷ್ಕೃತ ವೇಳಾಪಟ್ಟಿ(ಗುಲ್ಬರ್ಗ ವರದಿ): ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲಾ ಶಾಖೆಯ ಚುನಾವಣೆಯ ಪರಿಷ್ಕೃತ ವೇಳಾಪಟ್ಟಿಯಂತೆ ಜು.29ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಇಲಾಖಾವಾರು ಆಯ್ದ ಮತಗಟ್ಟೆಗಳಲ್ಲಿ ಚುನಾವಣೆ ನಡೆಯಲಿದೆ.
ಅಂದೇ ಸಂಜೆ 5 ಗಂಟೆಯಿಂದ ಮತಗಳನ್ನು ಏಣಿಕೆ ಮಾಡಿ ಫಲಿತಾಂಶ ಪ್ರಕಟಿಸಲಾಗುವುದು. ಚುನಾವಣೆ ಪ್ರಕ್ರಿಯೆಗಾಗಿ ಒಬ್ಬ ಪ್ರಿಸೈಡಿಂಗ್ ಅಧಿಕಾರಿ ಹಾಗೂ ಒಬ್ಬ ಪೊಲೀಂಗ್ ಅಧಿಕಾರಿಯನ್ನು ನೇಮಿಸಲಾಗುವುದು. ಮತಗಟ್ಟೆಗಳನ್ನು ಆಯಾ ಇಲಾಖೆಯ ಆವರಣದಲ್ಲಿಯೇ ಸ್ಥಾಪಿಸಲಾಗುವುದು. 1200ಕ್ಕಿಂತ ಅಧಿಕ ಮತದಾರರು ಇರುವ ಇಲಾಖೆಗೆ ಎರಡು ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement