ಬಸವ ಬೆಳಕು ಇಂದು
ಶಹಾಪುರ: ಪಟ್ಟಣದ ಬಸವ ಮಾರ್ಗ ಪ್ರತಿಷ್ಠಾನ ವತಿಯಿಂದ ತಿಂಗಳ ಬಸವ ಬೆಳಗು ಕಾರ್ಯಕ್ರಮ ಜು.25ರಂದು ಸಂಜೆ 6.30ಕ್ಕೆ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಜರುಗಲಿದೆ.
ಲಿಂಗಣ್ಣ ಸತ್ಯಂಪೇಟೆಯವರ ಪ್ರಥಮ ಸ್ಮರಣೋತ್ಸವದ ನಿಮಿತ್ತ ಜರುಗುವ ಕಾರ್ಯಕ್ರಮದಲ್ಲಿ ಸಿಂಧನೂರಿನ ಬಸವ ತತ್ವ ಅನುಭಾವಿಗಳಾದ ಗೋವಿಂದರಾಜ್ ಬಾರಿಕೇರ ಅವರು ವೇದ ನಡನಡಗಿತ್ತು ಎಂಬ ವಿಷಯದ ಕುರಿತು ಅನುಭಾವ ನೀಡಲಿದ್ದಾರೆ. ಮಾಜಿ ಶಾಸಕ ಶರಣಬಸ್ಸಪ್ಪಗೌಡ ದರ್ಶನಾಪುರ ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ. ವೀರಭದ್ರಗೌಡ ಅಮರಾಪುರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿನೂತಾ ಗುರುಬಸವ ಜ್ಯೋತಿ ಬೆಳಗಿಸುವರು. ಮೈಲಾರಪ್ಪ ಸಗರ, ಭೀಮರಾಯ ನುಚ್ಚಿನ, ಶರಣು ಜಾಲಹಳ್ಳಿ ಬಸವ ಮಾರ್ಗದ ಹಾಡುಗಳನ್ನು ಹಾಡುವರು. ಹಣಮಂತ ನರಸನಾಯಕರಿಗೆ ಪ್ರತಿಷ್ಠಾನ ಸನ್ಮಾನಿಸಲಿದೆ. ಶಿವಣ್ಣ ಇಜೇರಿ ಸಭೆಯ ಸಂಚಾಲನೆ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೇಟೆ ತಿಳಿಸಿದ್ದಾರೆ.