ಹಕ್ಕಿಗಾಗಿ ಕಾನೂನು ಅರಿವು ಅಗತ್ಯ
ಸುರಪುರ: ನಮ್ಮ ಕ್ರಿಯೆಯಿಂದ ಇನ್ನೊಬ್ಬರ ಹಕ್ಕು ಬಾಧ್ಯತೆಗಳು ಹರಣವಾದರೆ ಅದು ಅಪರಾಧವಾಗುತ್ತದೆ. ಹಕ್ಕು ಬಾಧ್ಯತೆಗಳ ತಿಳಿವಳಿಕೆಗಾಗಿ ಕಾನೂನು ಅರಿವು ಅಗತ್ಯ ಎಂದು ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಕೆ.ರವೀಂದ್ರ ಹೇಳಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪಪೂ ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಕಾರ, ತಾಲೂಕು ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯ, ಅಪಹರಣ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಹೆಣ್ಣು ಮಕ್ಕಳು ಧೃತಿಗೆಡದೆ ಆತ್ಮವಿಶ್ವಾಸ ಬೆಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಧೈರ್ಯವಾಗಿ ಬದುಕುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಜೆಎಂಎಫ್ಸಿ ಕಿರಿಯ ಶ್ರೇಣಿ ನ್ಯಾಯಾಧೀಶರಾದ ಶಶಿಧರಗೌಡ ಮಾತನಾಡಿ, ಕಾನೂನಿಗೆ ಬಡವ, ಶ್ರೀಮಂತ, ಮೇಲು- ಕೀಳು ಎಂಬ ಭೇದ- ಭಾವ ಇರುವುದಿಲ್ಲ ಎಂದರು. ಕಾಲೇಜಿನ ಪ್ರಾಂಶುಪಾಲ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ವಿ.ಸಿ.ಪಾಟೀಲ್, ಮಹ್ಮದ್, ಜಿ.ಎಸ್. ಪಾಟೀಲ್, ಜಿ.ತಮ್ಮಣ್ಣ, ಎನ್.ಎಸ್. ಪಾಟೀಲ್, ಬನಾಳೆ, ಶ್ರೀನಿವಾಸ ಜಾಲವಾದಿ ಇದ್ದರು. ಛಾಯಾ ಕುಂಟೋಜಿ ಮಹಿಳೆಯರ ಕಾನೂನು ಬಗ್ಗೆ, ಶ್ರೀದೇವಿ ಪಾಟೀಲ್ ರ್ಯಾಗಿಂಗ್ ನಿಷೇಧದ ಬಗ್ಗೆ ಉಪನ್ಯಾಸ ನೀಡಿದರು.