ಅಪಘಾತ: ಬಟ್ಟೆ ವ್ಯಾಪಾರಿ ಸಾವು
ಕನ್ನಡಪ್ರಭ ವಾರ್ತೆ,ಆಳಂದ,ಜು.25
ಬಟ್ಟೆ ವ್ಯಾಪಾರ ಕೈಗೊಳ್ಳಲು ಪಟ್ಟಣದಿಂದ ನಿಂಬರಗಾ ಗ್ರಾಮದ ವಾರದ ಸಂತೆ ಹೊರಟ್ಟಿದ ಸ್ಥಳೀಯ ವ್ಯಾಪಾರಿಯೊಬ್ಬನ ಟಿವಿಎಸ್ಗೆ ಎದುರಿನಿಂದ ಬಂದ ಬುಲೆರಾ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಾಪಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡದಿದೆ.
ಪಟ್ಟಣದ ದರ್ಗಾ ರಸ್ತೆಯ ಮಹಾದೇವ ಮಂದಿರ ಬಡಾವಣೆಯ ನಿವಾಸಿ ಬಾಲಚಂದ್ರ ಶ್ರೀಪಾಲ ಎಣೆಗೂರೆ (41) ಮೃತರು.
ನಿಂಬರಗಾ ಗ್ರಾಮಕ್ಕೆ ಪಟ್ಟಣದಿಂದ ಟಿವಿಎಸ್ ಎಕ್ಸಲ್ ವಾಹನದಲ್ಲಿ ಬೆಳಗಿನ ಜಾವ ಬಟ್ಟೆ ವ್ಯಾಪಾರಕ್ಕೆ ಹೊರಟ್ಟಿದ್ದಾಗ ಕೋರಳ್ಳಿ ಕ್ರಾಸ್ ಹತ್ತಿರ ವಾಗ್ದರಿ- ರಿಬ್ಬನಪಲ್ಲಿ ರಸ್ತೆ ಮೇಲೆ ಎದುರಿನಿಂದ ಬಂದ ಬುಲೆರಾ ವಾಹನ ಡಿಕ್ಕಿಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಬುಲೆರಾ ವಾಹನ ನಾಸಿಕ್ ನಗರಕ್ಕೆ ಹೊರಟ್ಟಿತ್ತು. ಮಹಾರಾಷ್ಟ್ರ ಫಾಸಿಂಗ್ ಹೊಂದಿರುವ ಹೈದ್ರಾಬಾದನ್ ಬಹಿಬೂಬ್ ನಗರದ ವಾಹನ ಎಂದು ಗುರುತಿಸಲಾಗಿದ್ದು, ಚಾಲಕ ಹಣಮಂತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನಾ ಸ್ಥಳಕ್ಕೆ ಪಿಎಸ್ಐ ರವಿಕುಮಾರ ಧರ್ಮಟ್ಟಿ ಭೇಟಿ ನೀಡಿ ತನಿಖೆ ಪರಿಶೀಲಿಸಿದ್ದಾರೆ. ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.