ಇಂದು 108 ಸೇವೆ ಸ್ಥಗಿತ
ಯಾದಗಿರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜು.26ರಂದು ಆರೋಗ್ಯ ಕವಚ 108 ಸೇವೆಯನ್ನು ಸ್ಥಗಿತಗೊಳಿಸಿ ಬೆಂಗಳೂರು ಪ್ರೀಡಂ ಪಾರ್ಕ್ನಲ್ಲಿ ಮುಷ್ಕರ ನಡೆಸಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಕವಚ ಸೇವೆಯ ಜಿಲ್ಲಾಧ್ಯಕ್ಷ ದಯಾನಂದ.ಬಿ. ಸಾಸನೂರ ತಿಳಿಸಿದ್ದಾರೆ. 108 ಸೇವೆಗಳ ಸಿಬ್ಬಂದಿ ಉದ್ಯೋಗ ಭದ್ರತೆ ಹಾಗೂ ವೇತನ ಹೆಚ್ಚಳ ಇನ್ನಿತರ ಸೌಲಭ್ಯಗಳ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಸಂಸ್ಥೆ ಮತ್ತು ಸರ್ಕಾರದ ಅಧಿಕಾರಿಗಳು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲಗೊಂಡಿದಾರೆ. ಆದ್ದರಿಂದ ಮುಷ್ಕರಕ್ಕೆ ತೆರಳುತ್ತಿರುವುದಾಗಿ ತಿಳಿಸಿದ್ದಾರೆ.
ನಗರ ಘಟಕ ಅಧ್ಯಕ್ಷ ಶಿವಣ್ಣ ನೇಮಕ
ಯಾದಗಿರಿ: ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ನಗರ ಘಟಕದ ಹಂಗಾಮಿ ಅಧ್ಯಕ್ಷರನ್ನಾಗಿ ಶಿವಣ್ಣ ವಿಶ್ವಕರ್ಮ ಅವರನ್ನು ವಿಶ್ವಕರ್ಮ ತಾಲೂಕು ಘಟಕ ಅಧ್ಯಕ್ಷ ಮಹೇಶ ವಿಶ್ವಕರ್ಮ ನೇಮಕಮಾಡಿದ್ದಾರೆ.