ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಂದು, ನಾಳೆ ಆಷಾಢ ಉತ್ಸವ

Lingaraj Badiger
Updated On : 26 Jul 2013, 11:49 am

ಗುಲ್ಬರ್ಗ: ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಜು.26 ಮತ್ತು 27 ರಂದು ಎರಡು ದಿನಗಳ ಕಾಲ ಹನುಮಾನ ಸದ್ಭಕ್ತ ಮಂಡಳಿ ಮತ್ತು ವೇದಾನಂದ ಸೇವಾ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಆಷಾಢ ಉತ್ಸವ ಹಮ್ಮಿಕೊಳ್ಳಲಾಗಿದೆ.
ಜು.26ರಂದು ಬೆಳಗ್ಗೆ 11ಕ್ಕೆ ಪ್ರಾಣದೇವರಿಗೆ ಹಾಗೂ ವೇದಾನಂದ ಮಹಾಸ್ವಾಮೀಜಿಗಳಿಗೆ ರುದ್ರಾಭಿಷೇಕ. ಮಧ್ಯಾಹ್ನ 2ಕ್ಕೆ ವೇದಾನಂದ ಸ್ವಾಮೀಜಿಗಳ ಗೃಹದಿಂದ ಪ್ರಾಣದೇವರ ಸನ್ನಿಧಿಗೆ ತೆರಳಿ, ಪ್ರಾಣದೇವರನ್ನು ಪಲ್ಲಕ್ಕಿಯಲ್ಲಿ ವಾರ್ಕರಿ ಸದ್ಭಕ್ತರಿಂದ ಭಜನೆ, ಕೀರ್ತನೆಯೊಂದಿಗೆ ಬರಮಾಡಿಕೊಳ್ಳುವುದು.
ರಾತ್ರಿ 7ಕ್ಕೆ ವನಿತೆಯರಿಂದ ಲಕ್ಷ್ಮೀ ಶೋಭಾನ ನಡೆಯುವುದು. ರಾತ್ರಿ 7.30 ರಂದ 8.30ರವರೆಗೆ ಉಮಾಮಹೇಶ್ವರ ಸ್ತೋತ್ರ ವೃಂದದಿಂದ ಸೌಂದರ್ಯ ಲಹರಿ ನಡೆಯುವುದು. ರಾತ್ರಿ 8.30ರಿಂದ 10ರವರೆಗೆ ತೀರ್ಥ ಪ್ರಸಾದ. ರಾತ್ರಿ 10ರಿಂದ 10.30ರವರೆಗೆ ಗೀತಾ ಸಾರ ನಡೆಯುವುದು. ರಾತ್ರಿ 10.30ರಿಂದ ಬೆಳಗಿನ ಜಾವ ಹಿಂದೂಸ್ತಾನಿ ಶಾಸ್ತ್ರೀಯ ಭಕ್ತಿ ಸಂಗೀತ.
ಜು.27ರಂದು ಬೆಳಗ್ಗೆ 7 ರಿಂದ 8ರವರೆಗೆ ಶಾರದಾ ಭಜನಾ ಮಂಡಳಿ ಬಿದ್ದಾಪುರ ಅವರಿಂದ ಆನಂದ ಸಿಂಧು ಸ್ತೋತ್ರ ಪಾರಾಯಣ. ಬೆ. 8ರಂದ 9ರವರೆಗೆ ಶಂಕರ ಸೇವಾ ಸಮಿತಿ ವತಿಯಿಂದ ಶಂಕರಾಚಾರ್ಯರ ಅಷ್ಠೋತ್ತರ.
ಬೆಳಗ್ಗೆ 9ರಿಂದ 10ರವರೆಗೆ ರಾಮರಕ್ಷಾ ಸ್ತೋತ್ರ ಅಭಿಯಾನ. ಬೆ. 10ರಿಂದ 10.30ರವರೆಗೆ ಹನುಮಾನ ಚಾಲಿಸಾ ಪಠಣ. ಬೆ.10.30 ರಿಂದ 12.30ರವರೆಗೆ ಪವಮಾನ ಹೋಮ, ಮಧ್ಯಾಹ್ನ 2ಕ್ಕೆ ಭಜನೆ, ಸಂಕೀರ್ತನೆಯೊಂದಿಗೆ ಪ್ರಾಣದೇವರನ್ನು ಪಲ್ಲಕ್ಕಿ ಮೆರವಣಿಗೆಯಲ್ಲಿ ಬೀಳ್ಕೊಡುವುದು. ಸಂಜೆ 6.30ಕ್ಕೆ ಫಲಮಂತ್ರಾಕ್ಷತೆ ತದನಂತರ ಪ್ರಸಾದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement