ಕಾಳಹಸ್ತೆಂದ್ರ ಸ್ವಾಮೀಜಿಗೆ ಭವ್ಯ ಸ್ವಾಗತ
ಶಹಾಪುರ: ರಾಜ್ಯ ವಿಶ್ವಕರ್ಮ ಮಠಗಳ ಪೀಠಾಧಿಪತಿಗಳ ಒಕ್ಕೂಟದ ರಾಜ್ಯಾಧ್ಯಕ್ಷರಾಗಿ ಕಾಳಹಸ್ತೆಂದ್ರ ಸ್ವಾಮಿ ಅವಿರೋಧವಾಗಿ ಆಯ್ಕೆಯಾದರು. ಈ ಹಿನ್ನೆಲೆಯಲ್ಲಿ ಶಹಾಪುರ ಪಟ್ಟಣದ ವಿಶ್ವಕರ್ಮ ಏಕದಂಡಿಗಿ ಮಠಕ್ಕೆ ಆಗಮಿಸಿದಾಗ ವಿಶ್ವಕರ್ಮ ಸಮಾಜದ ಬಂಧುಗಳು ಭವ್ಯ ಸ್ವಾಗತ ಕೋರಿ ಆತ್ಮೀಯವಾಗಿ ಸನ್ಮಾನಿಸಿದರು.
ಕಾಳಿಕಾ ದೇವಿ ಮಠದಲ್ಲಿ ಏರ್ಪಡಿಸಲಾಗಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಪೂಜ್ಯರು ಆಶೀರ್ವಚನ ನೀಡಿ ಮಾತನಾಡಿದರು. ಸಮಾಜದ ಮುಖಂಡರಾದ ಮೌನೇಶ ಪತ್ತಾರ, ರಾಜಶೇಖರ ಬೊಮ್ಮನಳ್ಳಿ ಜಗದೇವಪ್ಪ, ರಾಘವೇಂದ್ರ ಪತ್ತಾರ, ದೇವಿಂದ್ರ ಕನ್ಯಾಕೊಳೂರ, ನೀಲಕಂಠಪ್ಪ ವಡಗೇರಿ, ರಾಜು ಕಂಚಗಾರ, ಸುಧಾಕರ ಅಣ್ಣಿಗೇರಿ, ಲಕ್ಷ್ಮಣ ಕಂಬಾರ, ಕಾಳಹಸ್ತಿ ಐಕೂರ ಇತರರು ಇದ್ದರು.