ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸುಳ್ಳು ಪ್ರಮಾಣಪತ್ರ ರದ್ದತಿಗೆ ಆಗ್ರಹಿಸಿ ಪ್ರತಿಭಟನೆ

Lingaraj Badiger
Updated On : 26 Jul 2013, 11:48 am

ಕನ್ನಡಪ್ರಭ ವಾರ್ತೆ,ಚಿತ್ತಾಪುರ,ಜು.25
ತಾಲೂಕಿನ ಕುಂದನೂರ ಗ್ರಾಮದ ದಾದರಾವ ಬಾಬುರಾವ ಇವರು ತಹಿಸೀಲ್ದಾರ್ ಕಚೇರಿಯಿಂದ ಸುಳ್ಳು ಪರಿಶಿಷ್ಟ ಜಾತಿ ಪ್ರಮಾಣ ಪಡೆದಿದ್ದಾರೆ. ಅದನ್ನು ರದ್ದು ಮಾಡಬೇಕೆಂದು ಒತ್ತಾಯಿಸಿ ಮಾದಿಗ ದಂಡೋರ  ಸಮಾಜದ ಹಾಗೂ ಛಲವಾದಿ ಸಮಾಜದ ಮುಖಂಡರು ಗುರುವಾರ ಪ್ರತಿಭಟನೆ ಮಾಡಿ ತಹಸೀಲ್ದಾರ್‌ಗೆ ಮನವಿ ಪತ್ರ ಸಲ್ಲಿಸಿದರು.
ಇಂಗಳಗಿ ಗ್ರಾಪಂ ಉಪ ಚುನಾವಣೆಗೆ  ಸ್ಪರ್ಧಿಸಲು ದಾದರಾವ ಬಾಬುರಾವ ಅವರು ಜಾತಿಯಿಂದ ಮೀನುಗಾರರಾಗಿದ್ದು, ಪ್ರವರ್ಗ 2 (ಎ)ಗೆ ಸೇರಿರುತ್ತಾರೆ. ಆದರೆ ತಹಸೀಲ್ದಾರ್ ಕಚೇರಿಯಿಂದ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ಸಮಾಜದ ಮುಖಂಡ ರಾಜು ಮುಕ್ಕಣ್ಣ, ಮರೆಪ್ಪ ಕರದಾಳ ಮಾತನಾಡಿದರು. ಶಿರಸ್ತೇದಾರ ಶ್ರೀನಿವಾಸ ಚಾಪೆಲ್ ಮನವಿ ಪತ್ರ ಸ್ವೀಕರಿಸಿ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಭರವಸೆ ನೀಡಿದರು.
ಮುಖಂಡರಾದ ದೇವಿಂದ್ರಪ್ಪ ಹಾದಿಮನಿ, ಮಲ್ಲಿಕಾರ್ಜುನ ಕಾಳಗಿ, ಪರಶುರಾಮ ಕಟ್ಟಿಮನಿ, ಅಪ್ಪಾರಾವ ಸರಡಗಿ, ಆನಂದ ಕಲ್ಲಕ್, ಶಿವಯೋಗಿ ರಾವೂರ, ಮಾರುತಿ ಜಿ.ಕೆ, ಮಹಾಂತೇಶ ಬಮ್ಮನಳ್ಳಿ, ಗುರುಲಿಂಗಪ್ಪ ಚಂದನ, ನಾಗಪ್ಪ ದಂಡಗುಂಡ, ಹಣಮಂತ ಕೊಪ್ಪದ, ವೀರಭದ್ರಪ್ಪ ಕುಂದನೂರ, ಬಸವರಾಜ ಮುಡಬೂಳಕರ್, ರಾಜು ಭೀಮರಾಯ, ಅಪಸರ ಪಟೇಲ್, ಮಲ್ಲು, ಹುಸನಪ್ಪ ಇದ್ದರು.
--
ಮುಂದೂಡಿಕೆ
ಗುಲ್ಬರ್ಗ: ಡಾ. ಬಾಬು ಜಗಜೀವನರಾಮ್ ಸ್ಮಾರಕ ಶಿಕ್ಷಣ ಸಂಸ್ಥೆಯಿಂದ ಜು.28ರಂದು ನಗರದಲ್ಲಿ ನಡೆಯಬೇಕಾಗಿರುವ ರಾಜ್ಯ ಮಟ್ಟದ ಪ್ರತಿಭೋತ್ಸವ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ.
ಈಗಾಗಲೇ ಪ್ರಕಟಿಸಿದಂತಹ ಎಲ್ಲ ಕಾರ್ಯಕ್ರಮಗಳು ಹಾಗೂ ನಿಗದಿಪಡಿಸಿದ ಸ್ಪರ್ಧೆಗಳು ಮತ್ತು ಪ್ರಶಸ್ತಿ ಪುರಸ್ಕಾರಗಳು ಆ.18ರಂದು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ನಗರದ ಕನ್ನಡ ಭವನದಲ್ಲಿ ನಡೆಸಲಾಗುವುದು ಎಂದು ಕಾರ್ಯದರ್ಶಿ ಎಸ್.ಎಲ್. ತೋರಣಕರ್ ತಿಳಿಸಿದ್ದಾರೆ. ವಿವರಕ್ಕೆ ಮೊ. 99004 10402 ಸಂಪರ್ಕಿಸಬಹುದು.
ಇಂದು ಕಾರ್ಯಾಗಾರ
ಗುಲ್ಬರ್ಗ: ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಆಯುಷ್ ವೈದ್ಯರಿಗೆ ಮತ್ತು ಅಧಿಕಾರಿಗಳಿಗೆ ಜು.26 ರಂದು ಜೇವರ್ಗಿ ತಾಲೂಕಿನ ಶರಣ ಕೃಪಾ ಬೋರ್ಡಿಂಗ್ ಮತ್ತು ಲಾಡ್ಜಿಂಗ್‌ನಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ. ತಜ್ಞ ವೈದ್ಯರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement