ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಳೆ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Lingaraj Badiger
Updated On : 27 Jul 2013, 11:22 am

ಗುಲ್ಬರ್ಗ: ಪತ್ರಿಕಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಪ್ರಸಕ್ತ ಸಾಲಿಗೆ 11 ಜನ ಪತ್ರಕರ್ತರಿಗೆ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಶ್ರೀನಿವಾಸ ಸಿರನೂರಕರ್- ವಿ.ಎನ್. ಕಾಗಲಕರ್ ಪ್ರಶಸ್ತಿ, ಜಯತೀರ್ಥ ಕಾಗಲಕರ್- ರಾಘು ಜಹಾಗೀರದಾರ ಪ್ರಶಸ್ತಿ, ಎಂ.ಪಿ. ರಾಮರಾವ್- ಶಿವಗಾಮಿ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ನಾಗಯ್ಯ ಸ್ವಾಮಿ- ಪದ್ಮಾವತಿ ವ್ಯಾಸಮುದ್ರ ಸ್ಮರಣಾರ್ಥ ಪ್ರಶಸ್ತಿ, ಡಿ.ಎಂ. ಪಾಟೀಲ್- ಸಂಗನಬಸವಯ್ಯ ಹಿರೇಮಠ ಸ್ಮರಣಾರ್ಥ ಪ್ರಶಸ್ತಿ, ಸಿದ್ದು ಸಾಹಿಹಾಳ- ಶಿವಣ್ಣ ಸಾಹು ಹಲಕರ್ಟಿ ಯಡ್ರಾಮಿ ಸ್ಮರಣಾರ್ಥ ಪ್ರಶಸ್ತಿ, ಗಿರೀಶ ಕುಲಕರ್ಣಿ- ಮಾಣಿಕಸಿಂಗ್ ಭವಾನಿಸಿಂಗ್ ಠಾಕೂರ ಸ್ಮರಣಾರ್ಥ ಪ್ರಶಸ್ತಿ, ಅರುಣಕುಮಾರ್ ಕುಲಕರ್ಣಿ- ವಿಮಲಾಬಾಯಿ ಸುಬೇದಾರ ಸ್ಮರಣಾರ್ಥ ಪ್ರಶಸ್ತಿ, ಡಾ. ಮಹ್ಮದ್ ಮಾಜೀದ್ ಅಲಿ- ಗ್ರೀನೋಬಲ್ಸ್ ಕನ್ನಡ ದಿನಪತ್ರಿಕೆ ಪ್ರಶಸ್ತಿ, ರಮೇಶ ಭಟ್- ಇನ್ಕ್ವಿಲಾಬ್ ಎ ಡೆಕ್ಕನ್ ಉರ್ದು ದಿನಪತ್ರಿಕೆ ಪ್ರಶಸ್ತಿ ಮತ್ತು ನಾಗರಾಜು ಚಿನಗುಡಿ- ಬುದ್ಧಲೋಕ ಕನ್ನಡ ದಿನಪತ್ರಿಕೆ ಪ್ರಶಸ್ತಿ ನೀಡಲಾಗುತ್ತಿದೆ.
ವಿ.ಎನ್. ಕಾಗಲಕರ್ ಪ್ರಶಸ್ತಿಗೆ 5001 ನಗದು ಮತ್ತು ಸ್ಮರಣಿಕೆ ಫಲಕ ಒಳಗೊಂಡರೆ, ಉಳಿದ ಎಲ್ಲ ಪ್ರಶಸ್ತಿಗಳಿಗೆ 1100 ನಗದು ಮತ್ತು ಸ್ಮರಣಿಕೆ ಫಲಕ ನೀಡಲಾಗುವುದು ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ  ಬಾಬುರಾವ ಯಡ್ರಾಮಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಘೋಷಣೆ ಮಾಡಿದರು.
ಜು.28ರಂದು ನಗರದ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಪತ್ರಿಕಾ ದಿನಾಚರಣೆಯಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ. ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.
ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ್, ಗುಲ್ಬರ್ಗ ಜಿಲ್ಲಾಧಿಕಾರಿ ಪ್ರಸನ್ನಕುಮಾರ್, ಗಂಗಾಧರ ಮೊದಲಿಯಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ದೇವೀಂದ್ರಪ್ಪ ಕಪನೂರ್, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಮಾಲಗಾರ, ಕಾರ್ಯದರ್ಶಿ ವಿ.ವಿ. ದೇಸಾಯಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement