ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಮಳಖೇಡ; ಇಂದು ಮಧ್ಯಾರಾಧನೆ ವೈಭವ

Lingaraj Badiger
Updated On : 27 Jul 2013, 11:23 am

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಜು.26
ದ್ವೈತ ವೇದಾಂತ ಚಕ್ರವರ್ತಿಗಳೆಂದೇ ಖ್ಯಾತರಾದ ಮಜ್ಜಯತೀರ್ಥರ ಆರಾಧನೆ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದ ಕಾಗಿಣಾ ತಟದಲ್ಲಿರುವ ಅವರ ಮೂಲವೃಂದಾವನ ಸನ್ನಿಧಾನದಲ್ಲಿ ಜು.26ರಿಂದ ಆರಂಭವಾಗಿದ್ದು ಜು.27 ಮತ್ತು 28ರಂದು ನಡೆಯಲಿದೆ.
ಜಯತೀರ್ಥರು ತತ್ವಜ್ಞಾನ ಪ್ರಪಂಚದ ಧ್ರುವತಾರೆಗಳು, ಅವರು ರಚಿಸಿದ ಶ್ರೀಮನ್ನ್ಯಾಯ ಸುಧಾಗ್ರಂಥ ತಾತ್ವಿಕ ಪ್ರಪಂಚದ ಮೇರುಕೃತಿ. ಶ್ರೀಮದಾಚಾರ್ಯರ ಭಾಷ್ಯಗಳನ್ನು ಜನಸಾಮಾನ್ಯರಿಗೆ ತಿಳಿಸಿಕೊಟ್ಟ ಶ್ರೇಯಸ್ಸು ಅವರದು. ಪರಮಾತ್ಮನ ಸರ್ವೋತ್ತಮತ್ವವನ್ನು ಅರಿಯಲು ಅವರ ಗ್ರಂಥಗಳೇ ಸಾಧಕಗಳಾಗಿವೆ.
ಶ್ರೀವ್ಯಾಸರ ಹೃದ್ಗುಹಾರ್ಥಗಳನ್ನು ತಿಳಿಸಲು ವಾಯುದೇವರು ಶ್ರೀಮದಾನಂದತೀರ್ಥರಾಗಿ ಅವತರಿಸಿದರೆ ಆಂದ ತೀರ್ಥರ ಭಾಷ್ಯಗಳನ್ನು ಸುಲಲಿತವಾಗಿ ತಿಳಿಸಿಕೊಡಲು ಇಂದ್ರಾಂಶ ಸಂಭೂತ ಹಾಗೂ ಶೇಷಾವೇಷರಾಗಿ ಜಯತೀರ್ಥರು ಅವತರಿಸಿದರು.
ಭಕ್ತರ ಸಂಭ್ರಮ: ಬೆಳಗಿನ ಸುಪ್ರಭಾತ, ಅಷ್ಟೋತ್ತರದೊಂದಿಗೆ ಜಯತೀರ್ಥರ ಆರಾಧನೆ ಶುಕ್ರವಾರ ಶುಭಾರಂಭಗೊಂಡಿತು. ಪವಮಾನ ಹೋಮ, ಅಶ್ವವಾಹನೋತ್ಸವ, ಪಂಡಿತರ ಪ್ರವಚನಗಳು ಪೂರ್ವಾರಾಧನೆಯ ವಿಶೇಷಗಳಾಗಿ ಸಹಸ್ರಾರು ಸಂಖ್ಯೆಯಲ್ಲಿ ಕಾಗಿಣಾ ತೀರದಲ್ಲಿ ಸೇರಿದ್ದ ಆಸ್ತಿಕ ಭಕ್ತರ ಮನ ಸೂರೆಗೊಂಡವು.
ಮದುತ್ತರಾದಿ ಮಠದ ಪೀಠಾಧಿಪತಿ ಸತ್ಯಾತ್ಮತೀರ್ಥ ಪಾದಂಗಳವರು ಆರಾಧನಾ ಮಹೋತ್ಸವದ ಸಾರಥ್ಯ ವಹಿಸಿಕೊಂಡಿದ್ದು ಇದು ಭಕ್ತರ ಪಾಲಿನ ಪ್ರಮುಖ ಆಕರ್ಷಣೆ. ಸುಪ್ರಭಾತ, ಅಷ್ಟೋತ್ತರ, ಪವಮಾನ ಹೋಮ, ಅಶ್ವವಾಹನೋತ್ಸವ, ಸಂಜೆ ಪಂಡಿತರಿಂದ ಪ್ರವಚನ, ಶ್ರೀಗಳಿಂದ ಅನುಗ್ರಹ ಸಂದೇಶಗಳಲ್ಲಿ ಮಿಂದು ಪುನೀತರಾಗಿರುವ ಭಕ್ತರು ಶನಿವಾರದ ಯತಿ ಪುಂಗವರ ಮಧ್ಯಾರಾಧನೆಯನ್ನು ಇದಿರು ನೋಡುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement