ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಲುಷಿತ ನೀರು: ಕ್ರಮಕ್ಕೆ ಆಗ್ರಹ

Mainashree
Updated On : 28 Jul 2013, 10:57 am

ಯಾದಗಿರಿ: ಶಹಾಪುರ ತಾಲೂಕಿನ ಹಾಲಗೇರಾ ಗ್ರಾಪಂ ವ್ಯಾಪ್ತಿಯ ಕುಮನೂರಲ್ಲಿ ಒಂದು ತಿಂಗಳಿಂದ ಕಲುಷಿತ ನೀರು ಸರಬರಾಜು ಮಾಡುತ್ತಿದ್ದು, ಇದರಿಂದ ಅನೇಕ ರೋಗರುಜಿನ ಹರಡುತ್ತಿದ್ದರೂ ಸಂಬಂಧಪಟ್ಟವರು ಕ್ರಮ ಕೈಗೊಳ್ಳುತ್ತಿಲ್ಲವೆಂದು ಕಟ್ಟಡ ಕಾರ್ಮಿಕರ ಸಂಘಟನೆ ಜಿಲ್ಲಾಧ್ಯಕ್ಷ ಸೈದಪ್ಪ ಗುತ್ತೇದಾರ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
  ಕುಮನೂರಲ್ಲಿ ತಿಂಗಳಿಂದ ಕಲುಷಿತ ನೀರು ಬರುತ್ತಿದ್ದು, ಈ ನೀರಿನಲ್ಲಿ ಕ್ರಿಮಿಕೀಟ, ಪಕ್ಷಿಗಳ ಪುಕ್ಕಗಳು ಬರುತ್ತಿವೆ. ಈ ನೀರು ಸಾರ್ವಜನಿಕರಿಗೆ ನಳದ ಮುಖಾಂತರ ಬರುತ್ತಿದ್ದು, ಟ್ಯಾಂಕ್ ಓಪನ್ ಇದೆ. ಇದರಿಂದ ನೀರು ದುರ್ವಾಸನೆ ಬೀರುತ್ತಿದ್ದು, ಕ್ರಿಮಿಕೀಟಗಳೂ ನಲ್ಲಿ ನೀರಿನಲ್ಲಿ ಪೂರೈಕೆಯಾಗುತ್ತಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದರು. ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ, ಶುದ್ಧ ನೀರನ್ನು ಸಾರ್ವಜನಿಕರಿಗೆ ಸರಬರಾಜು ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಜಮಾದಾರ ಅವರು ತಕ್ಷಣ ಸಂಬಂಧಪಟ್ಟವರಿಗೆ ಕರೆ ಮಾಡಿ ಶುದ್ಧ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
  ಗ್ರಾಮಸ್ಥರಾದ ಕುಮಲಪಪ್ಪ ಅಂಗಡಿ, ಭೋಜಣ್ಣಗೌಡ, ದೇವುನಾಯಕ ವರ್ಕನಳ್ಳಿ, ಸಕ್ರಪ್ಪ ಕೋನಹಳ್ಳಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement