ಗುಲ್ಬರ್ಗ; ಅತ್ಯುತ್ತಮ ಕಲಾವಿದರಿಗೆ ಇಂದು ಪ್ರಶಸ್ತಿ ಪ್ರದಾನ
ಗುಲ್ಬರ್ಗ: ಜಿಲ್ಲೆಯ ಕಲೆ ಮತ್ತು ಸಂಸ್ಕೃತಿ ಭಾರತೀಯ ರಾಯಲ್ ಅಕಾಡೆಮಿಯು ಜು.28ರಂದು ನಗರದ ವಿಟಿಎನ್ ಕ್ರಿಯೇಟಿವ್ ಆರ್ಟ್ ಸ್ಟುಡಿಯೋದಲ್ಲಿ ವಿವಿಧ ವಿಭಾಗಗಳಲ್ಲಿ ದೇಶದ 14 ಅತ್ಯುತ್ತಮ ಕಲಾವಿದರಿಗೆ ಪ್ರಶಸ್ತಿ ನೀಡಲು ನಿರ್ಧರಿಸಿದೆ.
ಜೈಪುರದ ಮೇಘನ ದಾಸ ಅವರ ಶಿಲ್ಪ ಕಲೆ ಶಿರ್ಷಿಕೆ ಹುಂಜ ಸವಾರಿಗೆ ರಾಯಲ್ ಪಾರಿತೋಷಕ ಪ್ರಶಸ್ತಿ ಮತ್ತು 10 ಸಾವಿರ ನಗದು, ಬಿಜಾಪುರದ ದ್ರಾಕ್ಷಯನಿ ಇಮಾನದ್ ಅವರ ಹಾರ್ಸ ಚಿತ್ರಕಲೆಗೆ ರಾಯಲ್ ಗೋಲ್ಡ್ ಪ್ರಶಸ್ತಿ, 7 ಸಾವಿರ ನಗದು, ಹಾಸನದ ಬಸವರಾಜ ಚಾರ್, ರತ್ನಾಗಿರಿಯ ಆಕಾಶ ಮಹಾದೇವ ಸೂರ್ಯವಂಶಿ ಮತ್ತು ಬೆಳಗಾವಿಯ ಅಬ್ದುಲ್ ಲತೀಫ್ ಅವರಿಗೆ ರಾಯಲ್ ಸಿಲ್ವರ್ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಲಾಗುವುದು. ಬೀದರ್‌ನ ಪ್ರಕಾಶ ಉಮರ್ಗೆ, ಸಾಂಗ್ಲಿಯ ಸಯಾಜಿರಾವ ರಂಗರಾವ ನಂಗರೆ ಮತ್ತು ಗುಲ್ಬರ್ಗದ ಮನೋಜಕುಮಾರ್ ಘಟ್ಟಿಕರ್ ಅವರಿಗೆ ರಾಯಲ್ ಅರ್ಹತೆ ಪ್ರಶಸ್ತಿ ಮತ್ತು 2,500 ನಗದು ಪುರಸ್ಕಾರ ನೀಡಲಾಗುವುದು. ತುಮಕೂರು, ಓರಿಸ್ಸಾ, ಬೆಳಗಾವಿ, ಪುಣೆ ಮತ್ತು ಕುಂಬಕೂನಂ ಒಟ್ಟು 6 ಕಲಾವಿದರಿಗೆ ರಾಯಲ್ ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಅಧ್ಯಕ್ಷ ಡಾ. ರೆಹಮಾನ್ ಪಟೇಲ್ ತಿಳಿಸಿದ್ದಾರೆ.