ಕಾರ್ಯಕಾರಿ ಸದಸ್ಯರ ಚುನಾವಣೆ ಇಂದು
ಗುಲ್ಬರ್ಗ: ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆ ಜು.29 ರಂದು ನಡೆಯಲಿದೆ. ವಿವಿಧ ಇಲಾಖೆಗಳಿಂದ 37 ಸ್ಥಾನಗಳಿಗೆ ಚುನಾವಣೆ ಜರುಗಲಿದ್ದು, ಚುನಾವಣೆ ಸೂಸೂತ್ರವಾಗಿ ನಡೆಸಲು ಸಿದ್ದತೆ ನಡೆಸಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗ ಇಲಾಖೆ ನಾಮಪತ್ರ ತಿರಸ್ಕೃತಗೊಂಡ ಪ್ರಯುಕ್ತ ಆ ಸ್ಥಾನಕ್ಕೆ ಚುನಾವಣೆ ಜರುಗುತ್ತಿಲ್ಲ. ಬಿ.ಎಸ್. ದೇಸಾಯಿ, ಹಣಮಂತಪ್ಪ (ರಾಜು) ಲೇಂಗಟಿ ಹಾಗೂ ಕೆ. ಈರಣ್ಣಗೌಡ ಅವರ ಪ್ಯಾನಲ್ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಂಘದ ಕಾರ್ಯಕಾರಿ ಸಮಿತಿ ಚುನಾವಣೆಗೆ ಪ್ರೌಢಶಿಕ್ಷಣ ವಿಭಾಗದಿಂದ ಸ್ಪರ್ಧಿಸಿರುವ ಸಿದ್ದಣ್ಣ ಪೂಜಾರಿ ಬಹುಮತದಿಂದ ಆರಿಸಿ ತರಬೇಕೆಂದು ಕರ್ನಾಟಕ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ತುಕಾರಾಮ ಚಿತ್ತಾಪುರ, ಪ್ರಧಾನ ಕಾರ್ಯದರ್ಶಿ ಜಮೀಲ್ ಇಮ್ರಾನ್ ಅಹ್ಮದ್, ಖಜಾಂಚಿ ಸಂತೋಷ ಮನವಿ ಮಾಡಿದ್ದಾರೆ.
ನಾಳೆ ಪ್ರತಿಭಟನೆ
ಗುಲ್ಬರ್ಗ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಐಟಿಸಿ ತರಬೇತಿದಾರರು ಜು.30 ರಂದು ನಗರದಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಎಐವೈಎಫ್ ಮುಖಂತರ ನೇತೃತ್ವದಲ್ಲಿ ಐಟಿಸಿ ತರಬೇತಿದಾರರು ಬೆಳಿಗ್ಗೆ 11ಕ್ಕೆ ನಗರದ ಜಗತ್ ವೃತ್ತದಿಂದ ಸರ್ದಾರ ವಲ್ಲಭಬಾಯಿ ಪಟೇಲ್ ವೃತ್ತದ ಮಾರ್ಗವಾಗಿ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮತ್ತು ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗುವುದು ಎಂದು ಹಣಮಂತರಾವ ಅಟ್ಟೂರ್ ಮತ್ತು ಅರುಣಕುಮಾರ್ ಪಾಟೀಲ್ ಮನವಿ ಮಾಡಿದ್ದಾರೆ.
ನಿರುದ್ಯೋಗಿಗಳಿಗೆ ತರಬೇತಿ
ಗುಲ್ಬರ್ಗ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ರಾಜ್ಯ ಹಿಂದುಳಿದ ವರ್ಗಗಳ ನಿರುದ್ಯೋಗಿ ಮಹಿಳಾ- ಪುರುಷ ಅಭ್ಯರ್ಥಿಗಳಿಗೆ ಕೇಂದ್ರ ಸರ್ಕಾರದ ಸೆಂಟ್ರಲ್ ಇನ್ಸಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಸಂಸ್ಥೆ, ಮೈಸೂರಿನಲ್ಲಿ ವಿವಿಧ ವೃತ್ತಿಗಳಲ್ಲಿ ತರಬೇತಿಗೆ ಅರ್ಜಿ ಆಹ್ವಾನಿಸಿದೆ. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ, ವಸತಿ ಕಲ್ಪಿಸಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಆಯಾ ಜಿಲ್ಲೆಯ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯ ಕಚೇರಿಯಿಂದ ಅಥವಾ ಇಲಾಖೆಯ ಢಿಢಿಢಿ.್ಞಛ್ಛಿಢಿಜ.್ಝಟಿ ದಿಂದ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಆಗಸ್ಟ್ 8ರೊಳಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.
ತರಬೇತಿಗೆ ಅರ್ಜಿ
ಗುಲ್ಬರ್ಗ: ಕೃಷ್ಣಾ ಸ್ವಯಂ ಉದ್ಯೋಗ ತರಬೇತಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಆ.1ರಿಂದ 30ರವರೆಗೆ ಮೋಟಾರ್ ರಿವೈಂಡಿಂಗ್ ಮತ್ತು ಪಂಪಸೆಟ್ ತರಬೇತಿ ನೀಡಲು ಉದ್ದೇಶಿಸಿದೆ.ಇಚ್ಛೆಯುಳ್ಳವರು ಜು.29 ರಂದು ಪ್ಲಾಟ ಸಂ. 33/1, ಸರ್ವೆ ಸಂ.32, ಧರಿಯಾಪುರ ಕೋಟನೂರ, ಜಿಡಿಎ ಲೇಔಟ್, ವರ್ತುಲ್ ರಸ್ತೆ ಹತ್ತಿರ (ದಕ್ಷಿಣ)ದಲ್ಲಿರುವ ಕೃಷ್ಣಾ ಸ್ವಯಂ ಉದ್ಯೋಗ ತರಬೇತಿ,ಗ್ರಾಮೀಣ ಅಭಿವೃದ್ಧಿಗೆ ಹಾಜರಾಗಲು ಕೋರಲಾಗಿದೆ. ಮಾಹಿತಿಗೆ 08472-292003 ಸಂಪರ್ಕಿಸಿ.