ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೃಷಿ ಅಧಿಕಾರಿಯಿಂದ ಬೆಳೆಗಳ ವೀಕ್ಷಣೆ

Lingaraj Badiger
Updated On : 29 Jul 2013, 11:04 am

ಗುಲ್ಬರ್ಗ: ಗುಲ್ಬರ್ಗ ತಾಲೂಕಿನ ಕಮಲಪುರ ಮತ್ತು ಮಹಾಗಾಂವ ಹೋಬಳಿಯ ವಿವಿಧ ಗ್ರಾಮಗಳ ಹೊಲಗಳಿಗೆ ಗುಲ್ಬರ್ಗ ಸಹಾಯಕ ಕೃಷಿ ನಿರ್ದೇಶಕರು ಭೇಟಿ ನೀಡಿ ಬಿತ್ತನೆಯಾದ ವಿವಿಧ ಬೆಳೆಗಳನ್ನು ವೀಕ್ಷಿಸಿದರು.
  ಮುಂಚಿತವಾಗಿ ಬಿತ್ತನೆಯಾದ ಉದ್ದು ಮತ್ತು ಹೆಸರು ಬೆಳೆಯಲ್ಲಿ ಹೂ ಮತ್ತು ಕಾಯಿ ಕಟ್ಟುವ ಹಂತದಲ್ಲಿದ್ದು, ಒಂದು ವಾರದಿಂದ ಸತತವಾಗಿ ಜಿಟಿ ಜಿಟಿ ಮಳೆಯಾಗಿರುವುದರಿಂದ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಆದ್ದರಿಂದ ರೈತರು ಹೊಲದಲ್ಲಿ ನಿಂತಿರುವ ನೀರು ಬಸಿದು ಹೊರಗೆ ಹೋಗುವಂತೆ ನೋಡಿಕೊಳ್ಳಬೇಕೆಂದು ರೈತರಿಗೆ ಸಲಹೆ ನೀಡಿದರು. ಮುಂಜಾಗ್ರತ ಕ್ರಮವಾಗಿ ಯೂರಿಯೂ ಅಥವಾ ಡಿಎಪಿ 20 ಗ್ರಾಂ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಕೈಗೊಳ್ಳಬೇಕು. ಅಲ್ಲಲ್ಲಿ ಹೆಸರು ಮತ್ತು ಉದ್ದಿನ ಬೆಳೆಗೆ ಹೇನಿನ ಬಾಧೆ ಕಂಡು ಬಂದಿರುವುದರಿಂದ ಕೀಟನಾಶಕಗಳಾದ ಇಮಿಡಾಕ್ಲೋಪ್ರಿಡ್ 0.3 ಮಿ. ಪ್ರತಿ ಲೀಟರ್ ಅಥವಾ ಡೈಮಿಥೋಯೆಟ್ 1.7 ಮಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು ಎಂದರು. ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಬೇಕೆಂದು ಹೇಳಿದರು.
ಮುಲ್ಲಾಮಾರಿ ನದಿಗೆ ನೀರು
ಚಿಂಚೋಳಿ: ತಾಲೂಕಿನ ಕೆಳದಂಡೆ ಮುಲ್ಲಾಮಾರಿ ಜಲಾಶಯದಲ್ಲಿ ಒಳ ಹರಿವು ಹೆಚ್ಚಾಗುತ್ತಿದ್ದು, ಜಲಾಶಯದ ನೀರಿನ ಮಟ್ಟ ಕಾಪಾಡಿಕೊಳ್ಳಲು ಕಳೆದ ಮೂರು ದಿನಗಳಿಂದ ಜಲಾಶಯದಿಂದ ಮುಲ್ಲಾಮಾರಿ ನದಿಗೆ 20.38 ಮಿಲಿಯನ್ ಕ್ಯೂಬಿಕ್ ಫೀಟ್ ನೀರು ಹರಿದು ಬಿಡಲಾಗಿದೆ ಎಂದು ಸಹಾಯಕ ಕಾಯನಿರ್ವಾಹಕ ಅಭಿಯಂತರ ಸೈಯದ್ ಶಾಹೀದ್ ಅಲಿ ತಿಳಿಸಿದ್ದಾರೆ.
  ಕೆಳದಂಡೆ ಮುಲ್ಲಾಮಾರಿ ಜಲಾಶಯದಿಂದ ಕಳೆದ ಮೂರು ದಿನಗಳಿಂದ ಸತತವಾಗಿ ಮುಲ್ಲಾಮಾರಿ ನದಿಗೆ ರಾತ್ರಿ ಸಮಯದಲ್ಲಿ ನೀರು ಗೇಟಿನ ಮೂಲಕ ಬಿಡಲಾಗುತ್ತಿದ್ದು, ಕೆಳಭಾಗದ ಗ್ರಾಮಗಳಾದ ಚಿಮ್ಮನಚೋಡ, ತಾಜಲಾಪುರ, ಗಾರಂಪಳ್ಳಿ, ಕನಕಪುರ, ಗೌಡನಹಳ್ಳಿ, ನಿಮಾ ಹೊಸಳ್ಳಿ, ಚಿಂಚೋಳಿ ಪಟ್ಟಣ, ಅಣವಾರ, ಪರದಾರ ಮೋತಕಪಳ್ಳಿ, ಇರಗಪಳ್ಳಿ, ಕರಚಖೇಡ, ಜಟ್ಟೂರ್ ಮುಂತಾದ ಗ್ರಾಮಗಳಲ್ಲಿ ಡಂಗೂರ ಸಾರುವ ಮೂಲಕ ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement