ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

'ಚುಟುಕು ಸಾಹಿತ್ಯದ ಶಕ್ತಿ ಅಪಾರ'

Lingaraj Badiger
Updated On : 29 Jul 2013, 11:07 am

ಶಹಾಪುರ: ಸಾಗರದಷ್ಟಿರುವ ವಿಷಯವನ್ನು ಸಾಸಿವೆ ಕಾಳಿನಲ್ಲಿ ಹಿಡಿದಿಡುವ ಶಕ್ತಿ ಚುಟುಕು ಸಾಹಿತ್ಯಕ್ಕಿದೆ ಎಂದು ಶಹಾಪುರ ಕಸಾಪ ತಾಲೂಕಾಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಅಭಿಪ್ರಾಯಪಟ್ಟರು. ವಿದ್ಯಾ ಜ್ಯೋತಿ ಪ್ರಕಾಶನದಿಂದ ಪಟ್ಟಣದ ಜೀವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಶೋಕ ಚೌಧರಿಯವರ ಚುಟುಕು ಚಿಗುರು ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
  ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ, ನಾಲ್ಕು ಸಾಲಿನ ಚುಟುಕು 4 ಪುಟದಷ್ಟು ಅರ್ಥ ಕೊಡುತ್ತದೆ. ಶಬ್ದಗಳು ಚಿಕ್ಕದಾದರೂ ಮೊನಚಾಗಿ, ಚಾಟಿ ಏಟು ಬೀಸುವಂತಿರುತ್ತವೆ. ಅದರ ಪರಿಚಯವನ್ನು ಅಶೋಕ ಚೌಧರಿಯವರ ಕೃತಿಯಲ್ಲಿ ಕಾಣುತ್ತೇವೆ. ಇನ್ನೂ ಅತ್ಯುತ್ತಮ ಕೃತಿಗಳು ಈ ಸಾರಸ್ವತ ಲೋಕಕ್ಕೆ ಕೊಡುಗೆಯಾಗಲೆಂದು ಹಾರೈಸಿದರು.
ಗ್ರಂಥ ಲೋಕಾರ್ಪಣೆ: ಹಿರಿಯ ಸಾಹಿತಿ ಎ.ಕೃಷ್ಣ, ಚುಟುಕು ಕವಿ ನಾಗಪ್ಪ ತ್ರಿವೇದಿ ಗ್ರಂಥ ಬಿಡುಗಡೆಗೊಳಿಸಿದರು. ಕೃತಿಯ ಕುರಿತು ಚಂದ್ರಕಾಂತ ಕರದಳ್ಳಿ ಮಾತನಾಡಿದರು. ಸಿದ್ರಾಮ ಹೊನ್ಕಲ್, ವಿಶ್ವಾರಾಧ್ಯ ಸತ್ಯಂಪೇಟ ಮಾತನಾಡಿದರು. ಅಧ್ಯಕ್ಷತೆಯನ್ನು ನಿವೃತ್ತ ಎಸ್ಪಿ ಚಂದ್ರಕಾಂತ ಭಂಡಾರಿ ವಹಿಸಿದ್ದರು. ಕಸಾಪ ಸುರಪುರ ತಾಲೂಕಾಧ್ಯಕ್ಷ ಶಾಂತಪ್ಪ, ಪ.ಮಾನು ಸಗರ, ಸಿದ್ದಣ್ಣ ಇದ್ದರು. ಡಾ. ಅಬ್ದುಲ್ ಕರೀಂ, ಡಾ. ವೆಂಕಣ್ಣಗೌಡ, ಜನಾರ್ಧನ, ನಿಂಗಣ್ಣ, ನಿಂಗಣ್ಣ, ಸುಧಾಕರ, ನಂದು, ಮಲ್ಲು, ಸುನೀಲ್, ಶರಣಪ್ಪ, ಶರಣಗೌಡ, ರುದ್ರಪ್ಪ ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement